ಕಾಸರಗೋಡು: ಲಾಕ್ ಡೌನ್ ಕಾಲಾವಧಿಯಲ್ಲಿ ನಿಲುಗಡೆಗೊಳಿಸಲಾಗಿದ್ದ ಅಂತಾರಾಜ್ಯ ಬಸ್ ಸಂಚಾರವನ್ನು ಪುನಾರಂಭಿಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ. ಅವರು ಬಿಜೆಪಿ ಉದುಮ ಪಂಚಾಯಿತಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕೆಲಸ ನಿರ್ವಹಿಸುವ ಕಾಸರಗೋಡಿನ ನೂರಾರು ಮಂದಿ ಬಸ್ ಸಂಚಾರ ಸೌಕರ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಚಿಕಿತ್ಸೆಗಾಗಿ ತೆರಳುವವರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಬಸ್ ಸೌಕರ್ಯವಿಲ್ಲದೆ ಕಂಗೆಟ್ಟಿದ್ದಾರೆ. ಪಿಣರಾಯಿ ವಿಜಯನ್ ಸರ್ಕಾರ ವಿಧಿಸುತ್ತಿರುವ ಇಂತಹ ನಿಯಂತ್ರಣ ಜನಜೀವನವನ್ನು ದುರ್ಬಲಪಡಿಸುತ್ತಿರುವುದಾಗಿ ಆರೋಪಿಸಿದರು ಪಂಚಾಯಿತಿ ಸಮಿತಿ ಅಧ್ಯಕ್ಚ ವಿನಾಯಕ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕುಞÂಕಣ್ಣನ್ ತಂಬಾನ್, ಕೆ.ಪಿ ಪುಷ್ಪಾ, ವಿಶಾಲಾಕ್ಷನ್ ಮುಂತಾದವರು ಉಪಸ್ಥಿತರಿದ್ದರು.