HEALTH TIPS

ಸ್ವರ್ಗದ ಬಾಗಿಲು ಪಿತೃಪಕ್ಷದಲ್ಲಿ ಕೊನೆಗೂ ತೆರೆಯಿತು-ಬಿಜೆಪಿ ಪ್ರತಿಭಟನೆ ಸುಳಿವು ಲಭ್ಯವಾಗುತ್ತಿರುವಂತೆ ನಿಯಂತ್ರಣ ತೆರವು

       

      ಪೆರ್ಲ: ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟು ಕೊನೆಗೆ ಜನಾಕ್ರೋಶ, ರಾಜಕೀಯ ಪ್ರತಿರೋಧ-ಪ್ರತಿಭಟನೆಗಳ ಕಾರಣ ತಲಪ್ಪಾಡಿ ಹೆದ್ದಾರಿ ಸಹಿತ ಇತರ ಅಂತರ್ ರಾಜ್ಯ ದಾರಿಗಳು ತೆರೆಯಲ್ಪಟ್ಟರೂ ಗ್ರಾಮೀಣ ಪ್ರದೇಶವಾದ ಸ್ವರ್ಗದಲ್ಲಿ ನಿರ್ಮಿಸಿದ್ದ ನಿಯಂತ್ರಣ ಬ್ಯಾರಿಕೇಡ್ ಗಳನ್ನು ತೆರವುಗೊಳಿಸದೆ ಭಾರೀ ಅಸಂತುಷ್ಠಿಗೆ ಕಾರಣವಾಗಿದ್ದ ಸಮಸ್ಯೆ ನಾಟಕೀಯತೆಯೊಂದಿಗೆ ಕೊನೆಗೂ ಶನಿವಾರ ಸುಖಾಂತ್ಯಗೊಂಡಿತು.

     ಕಾಸರಗೋಡು ಜಿಲ್ಲೆಯ ಗಡಿ ಭಾಗ ಎಣ್ಮಕಜೆ ಪಂಚಾಯಿತಿಯ ಸ್ವರ್ಗದಲ್ಲಿ ಬಿಜೆಪಿ ಹಾಗೂ ಊರ ನಾಗರಿಕರ ನೇತೃತ್ವದಲ್ಲಿ ಶನಿವಾರ ನಡೆದ ಪ್ರತಿಭಟನೆ ಹಾಗೂ ಪೆÇಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಮುಚ್ಚಲಾಗಿದ್ದ ಪೆರ್ಲ ಪಾಣಾಜೆ ಪುತ್ತೂರು ಅಂತರರಾಜ್ಯ ಸಂಪರ್ಕ ರಸ್ತೆಯಲ್ಲಿ ಕೊನೆಗೂ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿ, ಕೇಂದ್ರ ಗೃಹ ಸಚಿವಾಲಯದ ಅನ್ ಲಾಕ್-4 ಮಾರ್ಗಸೂಚಿ ಕೇರಳದಲ್ಲೂ ಅನ್ವಯವಾಗಲಿದೆ ಎಂದು ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದರೂ, ಸ್ವರ್ಗದಲ್ಲಿ ಬ್ಯಾರಿಕೇಡ್ ಇರಿಸಿ ಜನರ ಸಂಚಾರಕ್ಕೆ ನಿಯಂತ್ರಣ ವಿಧಿಸಿದ ಜಿಲ್ಲಾಡಳಿತದ ಕ್ರಮ ಜನರ ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ.ಕೇರಳ ಸರಕಾರ ತನ್ನ ಘನತೆ ತೋರ್ಪಡಿಸಲು ಉಭಯ ರಾಜ್ಯಗಳ ಜನರ ನಡುವಿನ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುವ, ಜನರ ನಡುವೆ ಕಚ್ಚಾಟ ಉಂಟು ಮಾಡುವ ಪ್ರಯತ್ನದಲ್ಲಿದೆ.ಜನರ ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆ ಮುಂದುವರಿದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.


      ಸಾಮಾಜಿಕ ಹೋರಾಟಗಾರ ಡಾ.ಮೋಹನಕುಮಾರ್ ವೈ.ಎಸ್ ಮಾತನಾಡಿ, ಕೇರಳ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತ ಕೇಂದ್ರ ಸರಕಾರ, ಕೇರಳ ರಾಜ್ಯ ಮುಖ್ಯಕಾರ್ಯದರ್ಶಿಯ ಆದೇಶವನ್ನು ಉಲ್ಲಂಘಿಸುವ ಮೂಲಕ ಭಾಷಾ ಅಲ್ಪಸಂಖ್ಯಾತ ಪ್ರದೇಶದ ಜನರಿಗೆ ಅನಗತ್ಯ ತೊಂದರೆ ಉಂಟು ಮಾಡುತ್ತಿದೆ.ಬಡ ಜನರ ಮತಗಳಿಸಿ ಚುನಾಯಿತರಾದ ಜನ ಪ್ರತಿನಿಧಿಗಳು ಸಮಸ್ಯೆಗಳ ಧ್ವನಿಯಾಗುವ ಬದಲು ಜಾಣ ಕುರುಡು ನಿಲುವು ತೋರಿಸುತ್ತಿರುವುದು ಗಡಿ ಭಾಗದ ಜನರಿಗೆ ಬಗೆಯುವ ಅತಿ ದೊಡ್ಡ ದ್ರೋಹವಾಗಿದೆ ಎಂದರು.

     ಬಿಜೆಪಿ ಕಾಸರಗೋಡು ಉಪಾಧ್ಯಕ್ಷೆ ರೂಪವಾಣಿ ಆರ್. ಭಟ್, ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ, ಉಪಾಧ್ಯಕ್ಷೆ ಶ್ಯಾಮಲಾ ಆರ್.ಪತ್ತಡ್ಕ, ಬಿಜೆಪಿ ಜಿಲ್ಲಾ  ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಅಧ್ಯಕ್ಷ ಸತ್ಯ ಶಂಕರ ಭಟ್,  ಮಂಜೇಶ್ವರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಬಾಳಿಕೆ, ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಜನ ಪ್ರತಿನಿಧಿಗಳಾದ ಸತೀಶ್ ಕುಲಾಲ್, ಮಮತಾ ರೈ, ಸಾಮಾಜಿಕ ನೇತಾರರಾದ ಗಣಪತಿ ಭಟ್ ಪತ್ತಡ್ಕ, ಶ್ರೀಹರಿ ಭಟ್ ಸಜಂಗದ್ದೆ, ಸುಬ್ರಹ್ಮಣ್ಯ ಭಟ್ ಕೆ.ವೈ., ರಮಾನಂದ ಎಡಮಲೆ, ಜಗದೀಶ್ ಕುತ್ತಾಜೆ, ರಾಧಾಕೃಷ್ಣ ಭಟ್ ಪತ್ತಡ್ಕ, ಸುಮಿತ್ ರಾಜ್, ನಾಗರಾಜ್ ಸ್ವರ್ಗ, ಗಡಿ ನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ ಎಸ್ .ಅಬೂಬಕ್ಕರ್ ಆರ್ಲಪದವು, ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ದಕ್ಷಿಣ ಕನ್ನಡ ಅವಲಂಬಿತ ಗಡಿನಾಡ ಹೋರಾಟ ಸಮಿತಿ, ಸಹಯಾತ್ರಿ ತಂಡದ ಸದಸ್ಯರು, ಊರ ನಾಗರಿಕರು ಭಾಗವಹಿಸಿದರು.

    ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ್ ಅಡ್ಕಸ್ಥಳ ಸ್ವಾಗತಿಸಿದರು.ಮಂಜೇಶ್ವರ ಮಂಡಲ  ಕಾರ್ಯದರ್ಶಿ ಸುರೇಶ್ ವಾಣೀನಗರ ವಂದಿಸಿದರು.

         ಆದರೂ ಕಾದು ನೋಡಬೇಕು: 

       ಸ್ವರ್ಗದ ಬ್ಯಾರಿಕೇಡ್ ತೆರೆವುಗೊಳಿಸದಿರುವ ಬಗ್ಗೆ  ಗುರುವಾರದಿಂದಲೇ ಜಿಲ್ಲಾಡಳಿತದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆಗಳು ವ್ಯಕ್ತಗೊಂಡಿತ್ತು. ಇದರಿಂದ ಶನಿವಾರ ಮುಂಜಾನೆಯೇ ಪೋಲೀಸರು ಬ್ಯಾರಿಕೇಡ್ ತೆರವುಗೊಳಿಸಿದ್ದರು. ಪ್ರತಿಭಟನೆ ತೀವ್ರಗೊಂಡಿರುವ ಮಧ್ಯೆ ಪೋಲೀಸ್ ರಿಗೆ ಜನರ ಶಕ್ತಿಯ ಅಗಾಧತೆ ಅರಿವಾಗಿದೆ. ಆದರೂ ಮೊಂಡುತನ ಬಿಡದಂತೆ ಭಾನುವಾರದಿಂದ ಬ್ಯಾರಿಕೇಡ್ ಪೂರ್ಣವಾಗಿ ತೆರವುಗೊಳಿಸದೆ ಅರ್ಧದಷ್ಟು ಮಾತ್ರ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೋಲೀಸ್ ಗೌಪ್ಯಮೂಲಗಳಿಂದ ತಿಳಿದುಬಂದಿದೆ. 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries