ಮಂಜೇಶ್ವರ: ಕೇರಳಕ್ಕೆ ನೀಡಿರುವ ಏಮ್ಸ್ ಆಸ್ಪತ್ರೆ ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಸಹಿ ಸಂಗ್ರಹ ಕಾರ್ಯಕ್ರಮ ನಡೆಯಿತು.
ಮಂಜೇಶ್ವರ ಘಟಕದ ವತಿಯಿಂದ ನಡೆದ ಸಹಿ ಸಂಗ್ರಹ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ. ಎಂ ಉದ್ಘಾಟಿಸಿದರು. ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಘಟಕದ ಹಮೀದ್ ನೆಲ್ಯಾಡಿ, ಹಸೈನಾರ್ ಕುಂಜತ್ತೂರು, ದಯಾನಂದ ಬಂಗೇರ, ಆರಿಫ್ ಮಚ್ಚಂಪಾಡಿ, ಯಾಕೂಬ್ ಜಾಹಿ, ಇಸಾಕ್ ಮಂಜೇಶ್ವರ, ಮೋಯ್ದೀನಬ್ಬ, ನಾರಾಯಣ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು.