ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಷನ್ ವತಿಯಿಂದ ವಿಶ್ವ ಸಾಕ್ಷರತಾ ದಿನಾಚರಣೆ ಆನ್ ಲೈನ್ ರೂಪದಲ್ಲಿ ಜರಗಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ರಾಜ್ಯ ಸಾಕ್ಷರತಾ ಮಿಷನ್ ನಿರ್ದೇಶಕಿ ಡಾ.ಎಸ್.ಶ್ರೀಕಲಾ ಪ್ರಧಾನ ಭಾಷಣ ಮಾಡಿದರು. ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಪಿ.ಜಯರಾಜನ್, ಕಾಞಂಗಾಡ್ ಬ್ಲೋಕ್ ಅಧ್ಯಕ್ಷೆ ಎಂ.ಗೌರಿ, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ, ಕಾಸರಗೋಡು ಬ್ಲೋಕ್ ಪಂಚಾಯತ್ ಕಾರ್ಯದರ್ಶಿ ಡಾ.ಅನುಪಮ್ ಎಸ್., ಕೋಡೋಂ-ಬೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕುಂuಟಿಜeಜಿiಟಿeಜಕಣ್ಣನ್, ತತ್ಸಮಾನ ತರಬೇತಿ ಸಂಚಾಲಕ ಕೆ.ರಾಘವನ್ ಮಾಸ್ಟರ್, ನೋಡೆಲ್ ಪ್ರೇಢರಕರಾದ ವಿನ್ಸೆಂಟ್, ಅನಿಲ್ ಕುಮಾರ್, ಗ್ರೇಸಿ ವೇಗಸ್, ಪರಮೇಶ್ವರ ನಾಯ್ಕ್, ಪುಷ್ಪಾ ಕುಮಾರಿ, ಆಯಿಷಾ, ತಂಗಮಣಿ, ಪ್ರೀನಾ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಟಿ.ವಿ.ಶ್ರೀಜನ್ ವಂದಿಸಿದರು.