ಮಂಜೇಶ್ವರ: ಮುಸ್ಲಿಂ ಲೀಗ್ ಆಡಳಿತವಿರುವ ವರ್ಕಾಡಿ ಗ್ರಾಮ ಪಂಚಾಯತಿಯ ವಾರ್ಡು 11 ಕೊಣಿಬೈಲು ವಾರ್ಡಿನ ಮುಗುಳಿ - ಸೊಡಂಕೂರು ರಸ್ತೆಯ ಉದ್ಯೋಗ ಖಾತರಿ ಯೋಜನೆಯಲ್ಲಿ ಮಂಜೂರಾದ ಕಾಂಕ್ರೀಟ್ ರಸ್ತೆಯ ಮುಂಗಡ ಹಣವು ಏ.16, ಏ.22 ಎಂಬ ಎರಡು ತಾರೀಕಿನಲ್ಲಿ ಒಟ್ಟು ಮೊತ್ತ 96,720.00 ಪಡೆದಿರುತ್ತಾರೆ. ರಸ್ತೆಯ ಕಾಮಗಾರಿಗೆ ಮಂಜೂರಾದ ಒಟ್ಟು ಮೊತ್ತ -4,92000.00 ಆಗಿದೆ. ಏಪ್ರಿಲ್ ತಿಂಗಳಲ್ಲಿ ಸುಮಾರು 1 ಲಕ್ಷದ ವರೆಗೆ ಹಣ ಮುಂಗಡ ಪಡೆದಿದ್ದರು. ಆದರೂ ಕಾಮಗಾರಿ ಪ್ರಾರಂಭ ಆಗಿರಲಿಲ್ಲ. ಈ ಮಾಹಿತಿ ಪಂಚಾಯತ್ ಸದಸ್ಯ ರಾದ ಗೋಪಾಲ (ಪಕ್ಷೇತರ ಅಭ್ಯರ್ಥಿ )ಅವರು ಮತ್ತು ಬಿಜೆಪಿ ಜನ ಪ್ರತಿನಿಧಿ ಗಳ ಗಮನಕ್ಕೆ ತಂದಿದ್ದು, ಅವರು ಪಿಡಿಒ ಅವರಿಗೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ಪಿಡಿಒ ಪರಿಶೋಧಿಸಿದಾಗ ಕಾಮಗಾರಿ ಪ್ರಾರಂಭ ಮಾಡದೇ ಬಿಲ್ ಬರೆದು ಹಣ ವಂಚನೆ ಮಾಡುವ ತಯಾರಿ ಆಗಿತ್ತು. ಈ ಬಿಲ್ ಗಳಿಗೆ ಪಂಚಾಯತ್ ಅಧ್ಯಕ್ಷರು ಮಜೀದ್ ಡಿಜಿಟಲ್ ಸಹಿ ಹಾಕಿದ್ದಾರೆ. ಇದನ್ನ ತನಿಖೆಯ ಮೂಲಕ ತಿಳಿದ ಪಿಡಿಒ ಅಧಿಕಾರಿಗಳು ಸಹಾಯಕ ಅಭಿಯಂತರ ಅನ್ವರ್ ಅವರನ್ನು ಅಮಾನತುಗೈಯ್ಯಲು ಪಂಚಾಯತ್ ಕಾರ್ಯದರ್ಶಿ ಗೆ ಆದೇಶ ನೀಡಿದ್ದರು.
ಆದರೂ ಪಂಚಾಯತ್ ಅಧ್ಯಕ್ಷರು ಆ ವಾರ್ಡ್ ಸದಸ್ಯೆ ಭಾರತಿ ಎಂಬವರು ಭ್ರಷ್ಟಾಚಾರ ಮಾಡಿದವರನ್ನು ಬಚಾವ್ ಮಾಡಲು ಹರ ಸಾಹಸ ಮಾಡಿರುವುದು ಗಮನಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ಗ್ರಾ.ಪಂ.ಅಧ್ಯಕ್ಷರು, ಸದಸ್ಯೆ ಹಾಗೂ ಸಹಾಯಕ ಅಭಿಯಂತರರು ಹಣ ವಂಚನೆಗೈಯ್ಯಲು ಮಾಡಿದ ಯೋಜನೆಯಾಗಿತ್ತು ಎಂದು ಬಿಜೆಪಿ ಆರೋಪಿಸಿದೆ.
ಇದೀಗ ಉದ್ಯೋಗ ಖಾತರಿ ಉದ್ಯೋಗಸ್ಥರ ತಲೆಗೆ ಪಂಚಾಯತ್ ಸದಸ್ಯೆ ಭಾರತಿ ಮತ್ತು ಅಧ್ಯಕ್ಷರು ಮಜೀದ್ ಬಚಾವ್ ಆಗಲು ನೋಡುತಿದ್ದರೆ ಎಂದು ಬಿಜೆಪಿ ಆರೋಪಿಸಿದೆ.
ಇದರ ಕುರಿತು ಸಮಗ್ರ ತನಿಖೆ ಮಾಡಿ ಪಂಚಾಯತ್ ಸದಸ್ಯೆ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಮಾರ್ಚ್ ಇಂದು ಹಮ್ಮಿಕೊಳ್ಳಲಾಗಿದೆ. ಮಾರ್ಚ್ ನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸುವರು. ಮಂಡಲ ಅಧ್ಯಕ್ಷ ಮಣಿಕಂಠ ರೈ ಉಪಸ್ಥಿತರಿರುವರು.