ತಿರುವನಂತಪುರ: ಅಪರಾಧ ವಿಭಾಗದ ಮುಖ್ಯಸ್ಥ ಟೋಮಿನ್ ಜೆ ತಚ್ಚಂಗರಿ ರಾಜ್ಯದ ಡಿಜಿಪಿಗೆ ಬಡ್ತಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪೆÇಲೀಸ್ ಕರ್ತವ್ಯದ ಜೊತೆಗೆ ಹೆಚ್ಚುವರಿಯಾದ ಮಹತ್ವದ ವಿಷಯವೊಂದರ ಜವಾಬ್ದಾರಿಯನ್ನೂ ನೀಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಈ ತಿಂಗಳ 30 ರಂದು ರಸ್ತೆ ಸುರಕ್ಷತಾ ಆಯುಕ್ತ ಶೇಖರ್ ರೆಡ್ಡಿ ಅವರ ನಿವೃತ್ತಿಯೊಂದಿಗೆ, ಖಾಲಿಯಾಗುವ ಹುದ್ದೆಯನ್ನು ಭರ್ತಿ ಮಾಡಲು ತಚ್ಚಂಗೇರಿ ಅವರನ್ನು ನಿಯೋಜಿಸಲಾಗುತ್ತಿದ್ದು ಬಳಿಕ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ವರದಿಯಾಗಿದೆ.
ಜೂನ್ 2021 ರಲ್ಲಿ ರಾಜ್ಯ ಡಿಜಿಪಿ ಲೋಕನಾಥ್ ಬೆಹ್ರಾ ನಿವೃತ್ತರಾಗುತ್ತಿದ್ದು ಟೋಮಿನ್ ಜೆ ತಚ್ಚಂಗೇರಿ ಅವರನ್ನು ಆ ವೇಳೆಗೆ ರಾಜ್ಯದ ಡಿಜಿಪಿಯಾಗಿ ಅಧಿಕೃತ ಘೋಷಣೆ ಮಾಡಲಾಗುವುದೆಂದು ಹೇಳಲಾಗಿದೆ. ತಚ್ಚಂಗೇರಿಗೆ ಇನ್ನು ಮೂರು ವರ್ಷಗಳ ಸೇವಾವಧಿ ಇರಲಿದೆ.
ತಚ್ಚಂಗೇರಿ ಅವರು ಈ ಹಿಂದೆ ಕೋಝಿಕ್ಕೋಡ್, ಆಲಪ್ಪುಳ, ಇಡುಕ್ಕಿ, ಎರ್ನಾಕುಳಂ, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳ ಪೆÇಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರು ಕಣ್ಣೂರು ಶ್ರೇಣಿ ಐಜಿ, ಪೆÇಲೀಸ್ ಎಡಿಜಿಪಿ, ಸಾರಿಗೆ ಆಯುಕ್ತ, ಅಗ್ನಿಶಾಮಕ ದಳದ ಮುಖ್ಯಸ್ಥ ಮತ್ತು ಹಲವಾರು ಸಾರ್ವಜನಿಕ ವಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವರು.