ಕಾಸರಗೋಡು: ಮಹಿಳಾ ಶಿಶು ಕಲ್ಯಾಣ ಸಚಿವಾಲಯದ ವತಿಯಿಂದ ಪ್ರದಾನ ಮಾಡುವ ಬಾಲ್ ಶಕ್ತಿ, ಬಾಲ್ ಕಲ್ಯಾಣ್ ಪ್ರಶಶ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನ, ಕಲಾ-ಕ್ರೀಡಾ-ಸಾಂಸ್ಕøತಿಕ , ಸಮಾಜಸೇವೆ, ಸಂಶೋಧನೆ ವಲಯಗಳಲ್ಲಿ ಅದ್ವಿತೀಯ ಸಾಧನೆ ನಡೆಸಿದ ಮಕ್ಕಳು ಬಾಲ್ ಶಕ್ತಿ ಪ್ರಶಸ್ತಿಗೆ, ಮಕ್ಕಳ ಕಲ್ಯಾಣ, ಸಂರಕ್ಷಣೆ, ಏಳಿಗೆ ಇತ್ಯಾದಿ ವಲಯಗಳಲ್ಲಿ ಅತ್ಯುತ್ತಮ ಸಾಧನೆ ನಡೆಸಿರುವ ಮಕ್ಕಳು 'ಬಾಲ್ ಕಲ್ಯಾಣ್' ಪ್ರಶಸ್ತಿಗೆ ಅರ್ಜಿಸಲ್ಲಿಸಬಹುದು. ಅರ್ಜಿಗಳುhttp://nca-wcd.inc.in /ಲಭ್ಯವಿದ್ದು, ಸೆ.15ರ ಮುಂಚಿತವಾಗಿ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗಾಗಿ ಕಾಸರಗೋಡು ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್(ದೂರವಾಣಿ ಸಂಖ್ಯೆ:04994256990.)ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.