ತಿರುವನಂತಪುರ: ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಜನಶತಾಬ್ಡಿ ಸೇರಿದಂತೆ ರೈಲುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ಸರ್ಕಾರ ಕೇಂದ್ರಕ್ಕೆ ಪತ್ರ ಕಳುಹಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣ ಸೌಲಭ್ಯಗಳು ಸೀಮಿತವಾಗಿರುವ ಹೊತ್ತಲ್ಲೇ ರೈಲುಗಳನ್ನು ರದ್ದುಗೊಳಿಸುವ ನಿರ್ಧಾರವು ದೊಡ್ಡ ಸಂಕಷ್ಟಕ್ಕೆ ಕಾರಣವಾಗಲಿದೆ. ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯ ಪುನರಾರಂಭದ ಹಿನ್ನೆಲೆಯಲ್ಲಿ ದೂರ ಪ್ರಯಾಣದ ರೈಲುಗಳ ಅಗತ್ಯವಿದೆ ಎಂದೂ ಸಚಿವ ಜಿ.ಸುಧಾಕರನ್ ಅವರು ಪತ್ರದಲ್ಲಿ ಕೋರಿದ್ದಾರೆ.
ರೈಲುಗಳನ್ನು ನಿಲ್ಲಿಸದಂತೆ ವಿನಂತಿಸಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಸಂಸದ ಬಿನೊಯ್ ವಿಶ್ವಂ ಈ ಹಿಂದೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು. ಮೊದಲಿನಂತೆ ನಿಲ್ದಾಣಗಳನ್ನು ನಿರ್ವಹಿಸಿದರೆ ಮತ್ತು ಮುಂಗಡ ಕಾಯ್ದಿರಿಸುವಿಕೆ ಇಲ್ಲದ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಉಮ್ಮನ್ ಚಾಂಡಿ ಗಮನಸೆಳೆದಿದ್ದರು.