ಕೋಟ್ಟಯಂ: ಕೆ.ಎಸ್.ಆರ್.ಟಿ.ಸಿ. ಡಿಪೆÇೀದಿಂದ ಬೈಕ್ ಕದಿಯುವಾಗ ಕಳ್ಳನು ಎಂದಿಗೂ ಅಂತಹ ಅಪಘಾತ ಸಂಭವಿಸುತ್ತದೆ ಎಂದು ಭಾವಿಸಿರಲಿಲ್ಲ. ಆಘಾತಕಾರಿ ಘಟನೆ ಉದಯಂ ಪೆರೂರಿನಲ್ಲಿ ನಡೆದಿದೆ. ಕೊಟ್ಟಾಯಂ ಡಿಪೆÇೀದಲ್ಲಿದ್ದ ಬಿಜು ಅನೀಸ್ ಕ್ಸೇವಿಯರ್ ಅವರ ಬೈಕು ಕಳವು ಮಾಡಲಾಗಿತ್ತು.ಈ ಬಗ್ಗೆ ಬಿಜು ದೂರು ದಾಖಲಿಸಿದ್ದರು. ಆದರೆ ನಂತರ ಘಟನೆಗೆ ಟ್ವಿಸ್ಟ್ ಕುತೂಹಲಕಾರಿಯಾದುದು.
ಉದಯಂ ಪೆರೂರಿನ ಸಾರಿಗೆ ನೌಕರ ಬಿಜು ಅನೀಸ್ ಕ್ಸೇವಿಯರ್ ಅವರ ಬೈಕ್ ನ್ನು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಳವು ಮಾಡಿರುವ ಘಟನೆ ನಡೆದಿತ್ತು. ಕಳವು ನಡೆಸಿದಾತ ಜೋಜಿ ಎಂಬವ ಕೆಎಸ್‍ಆರ್‍ಟಿಸಿ ನೌಕರರು ಧರಿಸುವ ನೀಲಿ ಬಣ್ಣದ ಸಮವಸ್ತ್ರ ಧರಿಸಿ ಡಿಪೆÇೀಗೆ ಪ್ರವೇಶಿಸಿದ್ದರು. ಬಳಿಕ ಬಿಜು ಅವರ ಬೈಕ್ ಅಲ್ಲಿ ನಿಲ್ಲಿಸಿದ್ದನು ಗಮನಿಸಿ ಕಳವು ನಡೆಸಿದನು. ಬಿಜು ಮಧ್ಯಾಹ್ನ ವೇಳೆ ಬೈಕ್ ಕಳವು ನಡೆದಿರುವುದನ್ನು ಗಮನಿಸಿ ಕೊಟ್ಟಾಯಂ ಪಶ್ಚಿಮ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಬಳಿಕ ನಡೆದ ಘಟನೆ ಟಿಸ್ಟ್, ಬಿಜು ದೂರು ನೀಡಿ ಬಸ್ ನಿಲ್ದಾಣಕ್ಕೆ ಬಂದು ಕರ್ತವ್ಯದ ಮೇರೆಗೆ ಕರ್ತವ್ಯವೆಸಗುವ ಬಸ್‍ನಲ್ಲಿ ಎರ್ನಾಕುಳಂಗೆ ತೆರಳಿದರು. ಬಸ್ ಉದಯಂಪೆರೂರ್ ತಲುಪಿದಾಗ ಬಸ್ ನ ಹಿಂಬದಿಗೆ ಬೈಕ್ ವೊಂದು ಡಿಕ್ಕಿಹೊಡೆದು ಅಪಘಾತ ಸಂಭವಿಸಿತು. ಈ ವೇಳೆ ಬಿಜು ಬಸ್ ಇಳಿದು ನೋಡಿದಾಗ ಮತ್ತಷ್ಟು ಆಘಾತಕ್ಕೊಳಗಾದರು. ಕಾರಣ ಅಪಘಾತಕ್ಕೊಳಗಾದ ಬೈಕ್ ಸ್ವತಃ ಅವರದೇ ಆಗಿತ್ತು.
ಬಿಜು, ಬಸ್ ನಿರ್ವಾಹಕ ಮತ್ತು ಪ್ರಯಾಣಿಕರು ಆರೋಪಿ ಜೋಜಿಯನ್ನು ಬಂಧಿಸಿ ಪೆÇಲೀಸರಿಗೆ ಒಪ್ಪಿಸಿದರು. ಉದಯಂ ಪೆರೂರ್ ಪೆÇಲೀಸರು ಸ್ಥಳಕ್ಕೆ ತಲುಪಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಕೊಟ್ಟಾಯಂ ಪಶ್ಚಿಮ ಪೆÇಲೀಸರು ಜೋಜಿಯನ್ನು ವಶಕ್ಕೆ ತೆಗೆದುಕೊಂಡರು. ಯೋಗವಿದ್ದರೆ ಹೇಗಿದ್ದರೂ ಕಳೆದ ವಸ್ತು ಮರಳೀತೆಂಬುದಕ್ಕೆ ಇದು ಸಾಕ್ಷಿಯಾದರೂ ಅಪಘಾತಕ್ಕೊಳಗಾಗಿ ತನ್ನ ಬೈಕ್ ತನ್ನ ಕಣ್ಣೆದುರಲ್ಲಿ ಈ ರೀತಿಯಲ್ಲಿ ಲಭಿಸಿರುವುದನ್ನು ಬಿಜು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿರುವರು.