HEALTH TIPS

ಜಿಲ್ಲೆಯಲ್ಲಿ ಏರುಗತಿಯ ಕೋವಿಡ್ ಸೋಂಕು-ಈ ತಿಂಗಳಲ್ಲಿ ಸೋಂಕಿತರ ಸಂಖ್ಯೆ ದಾಟಿತು ನಾಲ್ಕು ಸಾವಿರ!

       

       ಕಾಸರಗೋಡು: ಈ ತಿಂಗಳ ಕೋವಿಡ್ ಅಂಕಿಅಂಶಗಳು ಜಿಲ್ಲೆಗೆ ಸಂಬಂಧಿಸಿ ತೀವ್ರಗತಿಯ ಏರಿಕೆಯನ್ನು ಕಂಡಿದ್ದು ಕಳವಳಕ್ಕೆ ಕಾರಣವಾಗಿದೆ. ಕಳೆದ ಐದು ತಿಂಗಳಲ್ಲಿ ಕೋವಿಡ್ ಸಂತ್ರಸ್ತರ ಸಂಖ್ಯೆಗೆ ಅನುಗುಣವಾಗಿ ಸಪ್ಟಂಬರ್ ತಿಂಗಳು ಮಾತ್ರವಾಗಿ ಈವರೆಗೆ ಜಿಲ್ಲೆಯ 9147 ಜನರು ಕೋವಿಡ್ ಪೀಡಿತರಾಗಿದ್ದಾರೆ. ನಿನ್ನೆಯ ವರದಿಯ ಅನುಸಾರ  ಜಿಲ್ಲೆಯಲ್ಲಿ ವೈರಸ್ 4005 ಮಂದಿಗಳಲ್ಲಿ ದೃಢೀಕರಿಸಲಾಗಿದೆ. ಆಗಸ್ಟ್ 31 ರ ಹೊತ್ತಿಗೆ 5142 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಮುಂದಿನ ಆರು ದಿನಗಳಲ್ಲಿ, ಕೋವಿಡ್ ಬಾಧಿತರಾದ ಜನರ ಸರಾಸರಿ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದೇ ವಿಶ್ಲೇಶಿಸಲಾಗುತ್ತಿದೆ. 

     ಆಗಸ್ಟ್ 31 ರ ಹೊತ್ತಿಗೆ 38 ಸಾವುಗಳು ವರದಿಯಾಗಿವೆ. ಆದರೆ ಈ ತಿಂಗಳಲ್ಲಿ ಅದು ಒಮ್ಮಿಂದೊಮ್ಮೆಗೆ 72 ಏರಿಕೆಯಾಗಿದೆ. ಈ ತಿಂಗಳಲ್ಲಿ ಮಾತ್ರ 34 ಜನರು ಸಾವನ್ನಪ್ಪಿದ್ದಾರೆ. ಸಂಪರ್ಕದ ಮೂಲಕ ಕೋವಿಡ್ ಸೋಂಕಿತ ಜನರ ಸಂಖ್ಯೆ ಈ ತಿಂಗಳಲ್ಲಿ ದ್ವಿಗುಣಗೊಂಡಿದೆ. ಕೋವಿಡ್ ಇದುವರೆಗೆ ಸಂಪರ್ಕದ ಮೂಲಕ 7952 ಜನರಿಗೆ ತಗಲಿದೆ. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಒಬ್ಬ ರೋಗಿ ಮಾತ್ರ ಇದ್ದರು. ಎರಡನೇ ಹಂತದಲ್ಲಿ 177 ಜನರಿದ್ದರು. ಮೂರನೇ ಹಂತದಲ್ಲಿ ಅದು ನೂರರ ಗಡಿ ತಲಪಿತ್ತು. ಕೋವಿಡ್ ಬಾಧಿತರ ಸಂಖ್ಯೆಯ ಹೆಚ್ಚಳಕ್ಕೆ ಓಣಂಗೆ ನೀಡಲಾದ ರಿಯಾಯಿತಿಗಳಿಂದಾಗಿ ಎಂದು ತಿಳಿದುಬಂದಿದೆ. ಈ ತಿಂಗಳ 21 ರ ನಂತರ ಹೆಚ್ಚಿನ ವಿನಾಯಿತಿಗಳನ್ನು ಘೋಷಿಸಲಾಗಿದೆ. ನಿನ್ನೆ ಜಿಲ್ಲೆಯ 300 ಜನರಲ್ಲಿ ಕೋವಿಡ್ -19 ದೃಢಪಟ್ಟಿತ್ತು. ಒಂದೇ ತಿಂಗಳಲ್ಲಿ ಇಷ್ಟೊಂದು ಮಂದಿಗೆ ಕೋವಿಡ್ ಹರಡಿರುವ ಬಗ್ಗೆ ಜಿಲ್ಲಾಡಳಿತ ಕಳವಳ ವ್ಯಕ್ತಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries