ಕಾಸರಗೋಡು: ಅ.2ರಿಂದ 8 ವರೆಗೆ ನಡೆಯುವ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ವಿವಿಧ ಸ್ಪರ್ಧೆಗಳನ್ನು ಆನ್ ಲೈನ್, ಟಪ್ಪಾಲು ಇತ್ಯಾದಿ ರೂಪಗಳಲ್ಲಿ ನಡೆಸಲಿದೆ.
ಸಾರ್ವಜನಿಕ ವಿಭಾಗದಲ್ಲಿ ವನ್ಯಜೀವಿ ಫೆÇಟೋಗ್ರಫಿ, ಯಾತ್ರಾ ಮಾಹಿತಿ( ಇಂಗ್ಲಿಷ್, ಮಲೆಯಾಳಂ) ಸ್ಪರ್ಧೆಗಳು ಆನ್ ಲೈನ್ ರೂಪದಲ್ಲಿ, ಭಿತ್ತಪತ್ರ ಡಿಸೈನ್, ಕಿರು ಚಿತ್ರ ಸ್ಪರ್ಧೆಗಳು ಟಪ್ಪಾಲು ರೂಪದಲ್ಲಿ ನಡೆಯಲಿವೆ. ವಿದ್ಯಾರ್ಥಿಗಳಿಗಾಗಿ( ಹೈಯರ್ ಸೆಕೆಂಡರಿ ಮತ್ತು ಕಾಲೇಜು ಮಟ್ಟದ) ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ. ಸೆ.30 ವರೆಗೆ ಎಂಟ್ರಿಗಳನ್ನು ಸಲ್ಲಿಸಬಹುದು. ಸ್ಪರ್ಧಾಳುಗಳು ಮುಂಚಿತವಾಗಿ ನೋಂದಣಿ ನಡೆಸಬೇಕು.
ವನ್ಯಜೀವಿ ಫೆÇಟೋಗ್ರಫಿ ಸ್ಪರ್ಧೆಯಲ್ಲಿ ಭಾಗವಹಿಸುವವರು 9447979082, 04712360762 ಎಂಬ ನಂಬ್ರಗಳಿಗೆ, ಭಿತ್ತಿಪತ್ರ ಡಿಸೈನ್ ಸ್ಪರ್ಧೆಯಲ್ಲಿ ಭಾಗವಹಿಸುವವರು 9447979135, 04712360462 ಎಂಬ ನಂಬ್ರಗಳಿಗೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವವರು 9496916900, 04952416900 ಎಂಬ ನಂಬ್ರಗಳಿಗೆ, ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವವರು 9447979144, 0487232060900 ಎಂಬ ನಂಬ್ರಗಳಿಗೆ, ಯಾತ್ರಾ ಮಾಹಿತಿ ಸ್ಪರ್ಧೆಯಲ್ಲಿ ಭಾಗವಹಿಸುವವರು 9447979152, 04994255234 ಎಂಬ ನಂಬ್ರಗಳಿಗೆ ಕರೆಮಾಡಬೇಕು. ಹೆಚ್ಚುವರಿ ಮಾಹಿತಿಗೆ ಅರಣ್ಯ ಇಲಾಖೆಯ ವೆಬ್ ಸೈಟ್ ((www.forest.kerala.gov.in) )ನ್ನು ಸಂದರ್ಶಿಸಬಹುದು.