ಕಾಸರಗೋಡು: ನಗರದ ಹೊರವಲಯದ ಚೆಂಬರಿಕ ಹಾಗೂ ಕಳನಾಡು ಪ್ರದೇಶಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಎಳೆಯ ಮಕ್ಕಳ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆಂಬರಿಕ ನಿವಾಸಿ ನಫೀಸಾ, ಶಶಿ, ಯೂಸುಫ್, ಕಳನಾಡ್ ನಿವಾಸಿಗಳಾದ ಒಂದುವರೆ ವರ್ಷ ಪ್ರಾಯದ ಮಹಮ್ಮದ್, ಅರಮಂಗಾನ ನಿವಾಸಿ ನಾಲ್ಕರ ಹರೆಯದ ಸೈನಬಾ, ಕಟ್ಟಕ್ಕಲ್ ನಿವಾಸಿ ಅಸ್ಲಾಂ ಹಾಗೂ ಕಳನಾಡ್ ನಿವಾಸಿ ರಾಬಿಯಾ ಗಾಯಗೊಂಡವರು. ಬೀದಿನಾಯಿಗಳ ದಾಳಿಗೆ ಸಿಲುಕಿದವರಿಗೆ ಕೈ, ಕಾಲು, ಮುಖ, ಎದೆ ಸಹಿತ ನಾನಾ ಕಡೆ ಗಾಯಗಳುಂಟಾಗಿದೆ. ಎರಡು ವಆರದ ಹಿಂದೆ ಕಾಸರಗೋಡು ಕೋಟೆಕಣಿ, ನುಳ್ಳಿಪ್ಪಾಡಿ ಸಹಿತ ವಿವಿಧೆಡೆ ಬೀದಿ ನಾಯಿಗಳ ದಾಳಿಯಿಂದ ಹಲವರು ಗಾಯಗೊಂಡಿದ್ದರು.