ತಿರುವನಂತಪುರಂ: ಕೇರಳ ಹಣಕಾಸು ಸಚಿವ ಡಾ.ಥಾಮಸ್ ಐಸಾಕ್ ಅವರಿಗೆ ಭಾನುವಾರ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ.
ಥಾಮಸ್ ಐಸಾಕ್ ಅವರು ನಿನ್ನೆ ಸಂಜೆ ಕೊರೋನಾ ಆಂಟಿಜನ್ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ಪಾಸಿಟಿವ್ ಬಂದಿದೆ.
ಆಂಟಿಜನ್ ಪರೀಕ್ಷೆಗೆ ಒಳಗಾದ ಕೇರಳದ ಮೊದಲ ಸಚಿವರಾಗಿದ್ದು, ಅವರ ಕಚೇರಿ ಸಿಬ್ಬಂದಿಗೂ ಆಂಟಿಜನ್ ಪರೀಕ್ಷೆ ನಡೆಸಿದ್ದು, ವರದಿ ನೆಗಟಿವಿ ಬಂದಿದೆ.
ಸಚಿವರೊಂದಿಗೆ ನೇರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಇಂದು ಅವರ ಕಚೇರಿಯನ್ನು ಸಾನಿಟೈಸ್ ಮಾಡಲಾಗುತ್ತಿದೆ.