ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತಿ ಮಿತಿಯ ನೇತೃತ್ವದಲ್ಲಿ ಜಾನಪದ ಪ್ರಶಸ್ತಿ ವಿಜೇತ ಮನು ಪಣಿಕ್ಕರ್ ರವರನ್ನು ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು. ಜೊತೆಗೆ ಹಿರಿಯರಾದ ಏತಡ್ಕ ಕೀರಿಕ್ಕಾಡ್ ಕೊರಗ ಅವರ ಮನೆಗೆ ತೆರಳಿ ನಿತ್ಯೋಪಯೋಗಿ ವಸ್ತುಗಳ ಕಿಟ್ ನ್ನು ವಿತರಿಸಲಾಯಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಪಂಚಾಯತಿ ಸಮಿತಿ ಅಧ್ಯಕ್ಷ ರವೀಂದ್ರ ರೈ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶರ್ಮ, ಮಂಡಲ ಸಮಿತಿ ಸದಸ್ಯ ನರಸಿಂಹ ಭಟ್, ಹರೀಶ್ ಕುಣಿಕುಳ್ಳಾಯ ನೇತಾರರಾದ ಪ್ರಜೇಶ್, ಸುರೇಶ್ ಕುಮಾರ್ ಎಸ್ ಕೆ, ಗಣೇಶ್ ಭಟ್, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.