HEALTH TIPS

ಟಾಟಾ ಆಸ್ಪತ್ರೆಯಲ್ಲಿ ನೂತನ ಹುದ್ದೆಗಳನ್ನು ಸೃಷ್ಟಿಸಿ, ಚಟುವಟಿಕೆ ಆರಂಭಿಸಲು ಹಣಕಾಸು ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ: ಆರೋಗ್ಯ ಸಚಿವೆ

       

         ಕಾಸರಗೋಡು: ಟಾಟಾ ಆಸ್ಪತ್ರೆಯಲ್ಲಿ ನೂತನ ಹುದ್ದೆಗಳನ್ನು ಸೃಷ್ಟಿಸಿ, ಚಟುವಟಿಕೆ ಆರಂಭಿಸಲು ಹಣಕಾಸು ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.

          ನೀಲೇಶ್ವರ ತಾಲೂಕು ಹೆಡ್ ಕ್ವಾರ್ಟರ್ಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಸೋಮವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

         ಸದ್ರಿ ಕಾಸರಗೋಡಿನಲ್ಲಿ ಸಿಬ್ಬಂದಿಯ ಕೊರತೆಯಿದೆ. ಈ ಕಾರಣದಿಂದ ಈ ಸಂಬಂಧ ಅನುಮತಿಗೆ ಅರ್ಜಿ ಸಲ್ಲಿಸಲಾಗಿದೆ. ಕಾಸರಗೋಡು ಮೆಡಿಕಲ್ ಕಾಲೇಜಿನ ಆಸ್ಪತ್ರೆ ಬ್ಲೋಕ್ ನ ನಿರ್ಮಾಣ ಕೊನೆಯ ಹಂತದಲ್ಲಿದೆ. 293 ನೂತನ ಹುದ್ದೆಗಳನ್ನು ಸೃಷ್ಟಿಸಿ ಇಲ್ಲಿನ ಚಟುವಟಿಕೆ ನಡೆಸಲಾಗುವುದು. ಹೀಗಿದ್ದರೂ, ವೈದ್ಯರು ಲಭಿಸದೇ ಇರುವುದು ಸಂದಿಗ್ಧತೆಗೆ ಕಾರಣವಾಗುತ್ತಿದೆ. ಸಾರ್ವಜನಿಕ ಆರೋಗ್ಯ ವಲಯ ಅಭಿವೃದ್ಧಿಗೊಳ್ಳುತ್ತಿರುವ ರಾಜ್ಯದಲ್ಲಿ ಏಮ್ಸ್ ಆಸ್ಪತ್ರೆ ಆರಂಭಕ್ಕೆ ಅನುಮತಿ ಅಗತ್ಯ. ಈ ಸಂಬಂಧ ರಾಜ್ಯ ಸರಕಾರ ಸತತ ಯತ್ನ ನಡೆಸುತ್ತಿದೆ. ಕೇಂದ್ರ ಸರಕಾರ ನೀಡುವ ಸೌಲಭ್ಯಗಳಿಗಿಂತ ಹಲವು ಪಟ್ಟು ಅಧಿಕ ಜನಪರ ಚಟುವಟಿಕೆಗಳನ್ನು ರಾಜ್ಯ ಸರಕಾರ ನಡೆಸುತ್ತಿದ್ದರೂ, ಅದಕ್ಕಿರುವ ಸೂಕ್ತ ಮನ್ನಣೆ ಲಭಿಸುತ್ತಿಲ್ಲ ಎಂದವರು ಹೇಳಿದರು. 

        ಕಿಫ್ ಬಿಯಲ್ಲಿ ಅಳವಡಿಸಿ ಹೆಚ್ಚುವರಿ ಯೋಜನೆಗಳನ್ನು ನೀಲೇಶ್ವರ ಆಸ್ಪತ್ರೆಯ ಸೌಲಭ್ಯ ಅಭಿವೃದ್ಧಿ ಪಡಸಿಉವ ನಿಟ್ಟಿನಲ್ಲಿ ಯೋಜನೆಗಳನ್ನು ರಚಿಸಲಾಗುತ್ತಿದೆ. ಚಿಕ್ಕ ಆರೋಗ್ಯ ಸಮಸ್ಯೆಗೂ ಇತರ ರಾಜ್ಯಗಳ ಆಸ್ಪತ್ರೆಗಳನ್ನು ಕಾಸರಗೋಡು ಜಿಲ್ಲೆಯ ಜನ ಆಶ್ರಯಿಸುವ ಕ್ರಮಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಸರಕಾರಿ, ಖಸಗಿ ಆರೋಗ್ಯ ಕೇಂದ್ರಗಳನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ನುಡಿದರು. 

       ನೀಲೇಶ್ವರ ತಾಲೂಕು ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನೀಲೇಶ್ವರ ನಗರಸಭೆ ಅವಿರತ ಯತ್ನ ನಡೆಸುತ್ತಿದೆ. ಕಿಫ್ ಬಿಯಲ್ಲಿ ಅಳವಡಿಸಿ 15 ಕೋಟಿ ರೂ. ವೆಚ್ಚದ ನಿರ್ಮಾಣ-ನವೀಕರಣ ಚಟುವಟಿಕೆ ನಡೆಸಲು ಆಡಳಿತೆ ಮಂಜೂರಾತಿ ಲಭಿಸಿದೆ. ಇದು ಜಾರಿಗೊಳ್ಳುವ ಜೊಎತೆಗ ಆಸ್ಪತ್ರೆ ಹೆಚ್ಚುವರಿ ಅಭಿವೃದ್ಧಿ ಗೊಳ್ಳಲಿದೆ ಎಂದವರು ತಿಳಿಸಿದರು. 

           ಮುನ್ನಡೆ ಸಾಧಿಸಿದ ಕಾಸರಗೋಡು ಜಿಲ್ಲೆ: 

     ಆರೋಗ್ಯ ವಲಯದಲ್ಲಿ ಕಾಸರಗೋಡು ಜಿಲ್ಲೆ ಮುನ್ನಡೆ ಸಾಧಿಸಿದೆ. ಒಂದೊಮ್ಮೆ ಈ ವಲಯದಲ್ಲಿ ಹಿಂದುಳಿದಿದ್ದ ಜಿಲ್ಲೆ ಸತತ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪ್ರಗತಿ ಸಾಧಿಸಿದೆ. 2016ರಲ್ಲಿ ಇದ್ದ ಜಿಲ್ಲೆಯಲ್ಲ 2020ರದು. ಆರೋಗ್ಯ ವಲಯದ ಬಾಲಪೀಡೆ ತೊಲಗುತ್ತಿದೆ. ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆ ಗಳಲ್ಲಿ ಮೂಲಭೂತ ಸೌಲಭ್ಯಗಳೆಲ್ಲವೂ ಸುಧಾರಿತಗೊಂಡಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಬಡ್ತಿ ಪಡೆದಿವೆ ಎಂದವರು ಹೇಳಿದರು.

      ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಆನ್ ಲೈನ್ ಮೂಲಕ ಭಾಗವಹಿಸಿದರು. ನೀಲೇಶ್ವರ ನಗರಸಭೆ ಉಪಾಧ್ಯಕ್ಷೆ ವಿ.ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ತೋಟತ್ತಿಲ್ ಕುಂuಟಿಜeಜಿiಟಿeಜಕಣ್ಣನ್, ವಾರ್ಡ್ ಸದಸ್ಯ ಪಿ.ಮನೋಹರನ್ ಮೊದಲಾದವರು ಭಾಗವಹಿಸಿದರು. ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ. ಜಯರಾಜನ್ ಸ್ವಾಗತಿಸಿದರು. ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಎ.ಜಮಾಲ್ ಅಹಮ್ಮದ್ ವಂದಿಸಿದರು.   

     ಎಂಡೋಸಲ್ಫಾನ್ ಪ್ಯಾಕೇಜ್ ನಲ್ಲಿ ಅಳವಡಿಸಿ ನಬಾರ್ಡ್ ನ ಸಹಾಯದೊಂದಿಗೆ 2.13 ಕೋಟಿ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ನೂತನ ಐ.ಪಿ.ಬ್ಲೋಕ್ ಕಟ್ಟಡ ನಿರ್ಮಿಸಲಾಗಿದೆ. ಇದರಲ್ಲಿ ವಿದ್ಯುತ್ ಸೌಲಭ್ಯವನ್ನು ನೀಲೇಶ್ವರ ನಗರಸಭೆ ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಒದಗಿಸಿವೆ. 

     1958ರಲ್ಲಿ ಅಂದಿನ ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದಿರಿಪ್ಪಾಡ್  ಅವರು ಉದ್ಘಟಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ, ನಂತರ ಸಾಮಾಜಿಕ ಆರೋಗ್ಯ ಕೇಂದ್ರವಾಗಿ ಬಡ್ತಿ ಪಡೆದಿತ್ತು. ತದನಂತರ ತಾಲೂಕು ಹೆಡ್ ಕ್ವಾರಟ್ಸ್ ಆಸ್ಪತ್ರೆಯಾಗಿ ಉನ್ನತಿ ಸಾಧಿಸಿತ್ತು. ಎನ್.ಬಾಲಕೃಷ್ಣನ್ ಆರೋಗ್ಯ ಸಚಿವರಾಗಿದ್ದದ ಅವಧಿಯಲ್ಲಿ 1974ರಲ್ಲಿ ಇಲ್ಲಿನ ಐ.ಪಿ. ಕಟ್ಟಡ ಉದ್ಘಾಟನೆಗೊಂಡಿತ್ತು. 

        ಇಂದು ಕಾಸರಗೋಡು ಜಿಲ್ಲೆಯ ವಿಮುಕ್ತಿ ಕೇಂದ್ರ, ಮಲ್ಟಿ ಫಾರ್ಮಿಸಿ ಕೌಂಟರ್, ಫಿಝಿಯೋ ಥೆರಪಿ ಯೂನಿಟ್ ಇತ್ಯಾದಿಗಳು ಈ ಆಸ್ಪತ್ರೆಯಲ್ಲಿ ಚಟುವಟಿಕೆ ನಡೆಸುತ್ತಿವೆ. ಡಯಾಲಿಸಿಸ್ ಯೂನಿಟ್ ಆರಂಭಿಸುವ ಚಟುವಟಿಕೆಗಳು ಚುರುಕಿನಲ್ಲಿ ಸಾಗುತ್ತಿಚವೆ. ನೀಲೇಶ್ವರ ಮತ್ತು ಆಸುಪಾಸಿನ ಜನತೆಯ ಆರೋಗ್ಯ ಸಂರಕ್ಷಣೆಯ ಆಶ್ರಯತಾಣ ಇದಾಗಿದೆ. 

       ತನ್ನ ನಿರಂತರ ಜನಪರ ಚಟುವಟಿಕೆಗಳ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಕಾಯಕಲಲ್ಪಂ ಪ್ರಶ್ತಿಗೆ ಸತತ 3 ಬಾರಿ ಈ ಆಸ್ಪತ್ರೆ ಭಾಜನವಾಗಿದೆ. ದಿನಂಪ್ರತಿ 800 ಕ್ಕೂ ಅಧಿಕ ಮಂದಿ ರೋಗಿಗಳು ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ. ನೂತನ ಕಟ್ಟಡದ ಲೋಕಾರ್ಪಣೆ ಮೂಲಕ ಇನ್ನಷ್ಟು ಸುಧಾರಿತ ಜನಸೇವೆ ಸಾಧ್ಯವಾಗಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries