ನವದೆಹಲಿ: ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ನುರಿತ ಮಾನವಶಕ್ತಿ ಅತ್ಯಗತ್ಯ ಎಂದು ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವ ನಿತಿನ್ ಗಡ್ಕರಿ ಸೋಮವಾರ ಪ್ರತಿಪಾದಿಸಿದ್ದಾರೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿಯಲ್ಲಿ ಸ್ಥಾಪಿಸಲಾಗಿರುವ ತಂತ್ರಜ್ಞಾನ ಕೇಂದ್ರವನ್ನು ಸೋಮವಾರ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಗಡ್ಕರಿ, ದೇಶದ ಜಿಡಿಪಿಯಲ್ಲಿ ಉತ್ಪಾದನಾ ವಲಯ ಶೇ 22 ರಿಂದ 24 ರಷ್ಟು ಕೊಡುಗೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ್ ಭಾರತ್' ಕರೆಯ ಹಿನ್ನೆಲೆಯಲ್ಲಿ ಸರ್ಕಾರ 15 ಹೊಸ ತಂತ್ರಜ್ಞಾನ ಕೇಂದ್ರಗಳನ್ನು (ಟಿಸಿಗಳು) ಸ್ಥಾಪಿಸುತ್ತಿದೆ.
ನುರಿತ ಮಾನವಶಕ್ತಿ ಸೃಷ್ಟಿಸಲು ಸದ್ಯ ಅಸ್ತಿತ್ವದಲ್ಲಿರುವ 18 ತಂತ್ರಜ್ಞಾನ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ದೇಶವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ನುರಿತ ಮಾನವಶಕ್ತಿ ಅತ್ಯಗತ್ಯ ಎಂದು ಹೇಳಿದ್ದಾರೆ.