ಮಂಜೇಶ್ವರ: ಮಂಗಳೂರಿನ ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಆಯೋಜನೆಗೊಂಡ ಅತ್ಯುತ್ತಮ ಯೋಜನಾ ತಯಾರಿ(ಪೆÇ್ರಜೆಕ್ಟ್ )ಗೆ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಬಂದಿರುತ್ತದೆ. ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿತೇಶ್ ಅವರ ಮಾರ್ಗದರ್ಶದಲ್ಲಿ ತಯಾರಿಸಿದ ಯೋಜನೆಯಲ್ಲಿ ಮಂಜೇಶ್ವರ ಅರಿಬೈಲ್ ನೆತ್ಯದ ಆದರ್ಶ್ ಶೆಟ್ಟಿ ಭಾಗವಾಹಿಸಿರುತ್ತಾರೆ. ಇವರು ಉದ್ಯಮಿ, ಧಾರ್ಮಿಕ-ಸಾಮಾಜಿಕ ನೇತಾರ ಅರಿಬೈಲು ಗೋಪಾಲ ಶೆಟ್ಟಿಯವರ ದ್ವಿತೀಯ ಪುತ್ರ.