ಕುಂಬಳೆ: ಉದ್ಯಮಿ, ನಾಯ್ಕಾಪು ನಿವಾಸಿ ಅಂಪ ನಾಯಕ್(80) ಬುಧವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಸೀತಾಂಗೋಳಿ ಕಿನ್ಪ್ರಾ ಕೈಗಾರಿಕಾ ಪ್ರಾಂಗಣ ಹಾಗೂ ನಾಯ್ಕಾಪಿನಲ್ಲಿ ಮೂರು ಆಯಿಲ್ ಮತ್ತು ಪ್ಲೋರ್ ಮಿಲ್ ಗಳ ಮಾಲಕರಾಗಿ ಗುಣಮಟ್ಟದ ಉತ್ಪನ್ನಗಳಿಂದ ಖ್ಯಾತರಾಗಿದ್ದರು. ಜೊತೆಗೆ ವಿವಿಧ ಆಹಾರೋತ್ಪನ್ನ ಸರಕುಗಳ ಏಜೆಂಟ್ ಕೂಡಾ ಆಗಿದ್ದರು. ಧಾರ್ಮಿಕ ಮುಂದಾಳುಗಳೂ ಆಗಿದ್ದ ಇವರು ಜಿಲ್ಲೆಯಲ್ಲೇ ಮೊತ್ತಮೊದಲ ಶಿರಾಡಿ ಸಾಯಿಬಾಬಾ ಮಂದಿರವನ್ನು ನಾಯ್ಕಾಪಿನಲ್ಲಿ ನಿರ್ಮಿಸಲು ಕಾರಣಕರ್ತರಾದವರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.