ಬೆಂಗಳೂರು: ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ, ಟಿಬೆಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ ಅವರ ಬಗ್ಗೆ ಕೆಲವು ಸೂಕ್ಷ್ಮ ಮಾಹಿತಿಗಳನ್ನು ತಿಳಿದುಕೊಳ್ಳಲು ಚೀನಾದ ನಾಗರಿಕರ ಬೇಹುಗಾರಿಕೆ ಜಾಲದ ಮೂಲಕ ಹವಾಲಾ ನೆಟ್ ವರ್ಕ್ ಬಳಸಿ ಟಿಬೆಟ್ ನಲ್ಲಿರುವ ತಮ್ಮ ಕುಟುಂಬದವರ ಮೂಲಕ ಕೆಲವು ಟಿಬೆಟ್ ನ ಸನ್ಯಾಸಿಗಳಿಗೆ ಹಣ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಬೇಹುಗಾರಿಕೆ ಆರೋಪದ ಮೇಲೆ ಕಳೆದ ಸೆಪ್ಟೆಂಬರ್ 13ರಂದು ದೆಹಲಿಯ ವಿಶೇಷ ಪೊಲೀಸರಿಂದ ಬಂಧಿತನಾಗಿದ್ದ ಬಂಧಿತನಾಗಿದ್ದ ಚೀನಾದ ಪ್ರಜೆ ಲುಯು ಸ್ಯಾಂಗ್ ಅಲಿಯಾಸ್ ಚಾರ್ಲಿ ಪೆಂಗ್ ಟಿಬೆಟಿಯನ್ನರು ಹೆಚ್ಚಾಗಿರುವ ದೆಹಲಿ, ಹಿಮಾಚಲ ಪ್ರದೇಶದಿಂದ ಹಿಡಿದು ಕರ್ನಾಟಕದವರೆಗೆ ಬೇಹುಗಾರಿಕೆ ನಡೆಸುತ್ತಾ ತನ್ನ ಜಾಲವನ್ನು ವಿಸ್ತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ಮ್ಯಾಕ್‌ಲಿಯೋಡ್‌ಗಂಜ್ ಕೇಂದ್ರ ಟಿಬೆಟಿಯನ್ ಆಡಳಿತ(ಸಿಟಿಎ) ಯ ಪ್ರಧಾನ ಕಚೇರಿಯಾಗಿದ್ದು, ಅಲ್ಲಿ ದಲೈ ಲಾಮಾ ವಾಸಿಸುತ್ತಿದ್ದಾರೆ. ಚೀನಾದ ಬಾಹ್ಯ ಗುಪ್ತಚರ ಸಂಸ್ಥೆ ರಾಜ್ಯ ಭದ್ರತಾ ಸಚಿವಾಲಯದ (ಎಂಎಸ್‌ಎಸ್) ಆದೇಶದ ಮೇರೆಗೆ ಹವಾಲಾ ಹಣ ವರ್ಗಾವಣೆಯಾಗುತ್ತಿರುವ ಬಗ್ಗೆ ಸುಳಿವು ಸಿಕ್ಕಿ, ಲುವೊ ನಡೆಸುತ್ತಿರುವ ಶೆಲ್ ಕಂಪನಿಗಳು ಮತ್ತು 40 ಬ್ಯಾಂಕ್ ಖಾತೆಗಳ ಮೂಲಕ 1,000 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವುದನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪತ್ತೆಹಚ್ಚಿದೆ. ಜಾರಿ ನಿರ್ದೇಶನಾಲಯ (ಇಡಿ) ತನ್ನ ಶೆಲ್ ಕಂಪನಿಗಳಿಂದ ದೆಹಲಿ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕಕ್ಕೆ ಹಣದ ಹಾದಿಯನ್ನು ಪತ್ತೆಹಚ್ಚಿದೆ ಎಂದು ವರದಿಯಾಗಿದೆ.
ದೇಶದಲ್ಲಿ ಟಿಬೆಟಿಯನ್ ವಸಾಹತುಗಳಿಗೆ ನುಸುಳಲು ಲುವೋಗೆ ಸಹಾಯ ಮಾಡಲು ಎಂಎಸ್ಎಸ್ ಹವಾಲಾ ಮಾರ್ಗವನ್ನು ಬಳಸುವುದಕ್ಕೆ ಒಂದು ಕಾರಣವೆಂದರೆ ಭಾರತ ಮತ್ತು ಟಿಬೆಟ್ ನಡುವೆ ಯಾವುದೇ ಬ್ಯಾಂಕಿಂಗ್ ಮಾರ್ಗಗಳು ಅಥವಾ ಹಣಕಾಸು ಸೇವೆಗಳಿಲ್ಲದಿರುವುದು. ಟಿಬೆಟ್‌ನ ಕೆಲವು ಕುಟುಂಬಗಳು ಸಾಂಪ್ರದಾಯಿಕವಾಗಿ ಭಾರತದಲ್ಲಿರುವ ತಮ್ಮ ರಕ್ತಸಂಬಂಧಿಗಳಿಗೆ ಹಣವನ್ನು ಕಳುಹಿಸುತ್ತಿದ್ದಾರೆ, ಅವರು ಟಿಬೆಟಿಯನ್ ಬೌದ್ಧಧರ್ಮವನ್ನು ಸನ್ಯಾಸಿಗಳಾಗಲು ಅಧ್ಯಯನ ಮಾಡುತ್ತಿದ್ದಾರೆ, ಇದರಿಂದಾಗಿ ಅವರ ಪದವಿ ಪೂರ್ಣಗೊಳಿಸಲು ನಡೆಸಬೇಕಾದ ಆಚರಣೆಗಳಿಗೆ ಸಹಾಯ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಯಾವುದೇ ಕಾನೂನುಬದ್ಧ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದಿರುವಾಗ, ಟಿಬೆಟ್‌ನಿಂದ ಭಾರತಕ್ಕೆ ಹಣವನ್ನು ಕಳುಹಿಸುವ ಏಕೈಕ ಮಾರ್ಗ ಹವಾಲಾ ಆಗಿದೆ, ಭಾರತದಲ್ಲಿ ಹವಾಲಾ ಕಾನೂನುಬಾಹಿರವಾಗಿದೆ ಏಕೆಂದರೆ ಇದು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ಕಾರ್ಯನಿರ್ವಹಿಸುತ್ತದೆ. ಜಾರಿ ನಿರ್ದೇಶನಾಲಯ, ಗುಪ್ತಚರ ದಳ, ಆದಾಯ ತೆರಿಗೆ ಇಲಾಖೆ ಮತ್ತು ಕರ್ನಾಟಕ ಪೊಲೀಸರ ತಂಡವು ಕರ್ನಾಟಕದ ಬೈಲುಕುಪ್ಪೆ ಮತ್ತು ಮುಂಡಗೋಡಿನಲ್ಲಿರುವ ಮಠಗಳಿಗೆ ಭೇಟಿ ನೀಡಿ ಕೆಲವು ಸನ್ಯಾಸಿಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಪ್ರಶ್ನಿಸಿದೆ.