ಕೊಚ್ಚಿ: ವರಿಯಾನ್ ಕುನ್ನತ್ತೆ ಕುಂಞÂ ಮೊಹಮ್ಮದ್ ಹಾಜಿ ಮತ್ತು ಅಲಿ ಮುಸ್ಲಿಯಾರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಹಿಂದೂ ಐಕ್ಯ ವೇದಿ ಒತ್ತಾಯಿಸಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಆಂದೋಲನಕ್ಕೆ ಸಂಬಂಧಿಸಿದ ಹುತಾತ್ಮರ ಪಟ್ಟಿಯನ್ನು ಬಿಡುಗಡೆ ಮಾಡುವುದು ಆಘಾತಕಾರಿ ಮತ್ತು ನಿಘಂಟನ್ನು ಹಿಂಪಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂ ಐಕ್ಯ ವೇದಿ ಹೇಳಿದೆ. ಹಿಂದೂ ಐಕ್ಯ ವೇದಿಯ ಬೇಡಿಕೆಯನ್ನು ರಾಜ್ಯ ಅಧ್ಯಕ್ಷ ಕೆ.ಪಿ.ಶಶಿಕಲಾ ತಮ್ಮ ಪೇಸ್ ಬುಕ್ ಪೋಸ್ಟ್ ಮೂಲಕ ಬಿಡುಗಡೆಮಾಡಲಾಗಿದೆ.
ವಾರಿಯನ್ ಕುನ್ನತ್ತೆ ಕುಂಞÂ ಅಹಮ್ಮದ್ ಹಾಜಿ ಮತ್ತು ಅಲಿ ಮುಸ್ಲಿಯಾರ್ ಅವರು "ಹಿಂದೂ ನರಮೇಧದ ನಾಯಕರು" ಎಂದು ಹಿಂದೂ ಐಕ್ಯ ವೇದಿ ಆರೋಪಿಸಿದೆ. "1921 ರ ಮಾಪ್ಪಿಳ್ಳ ದಂಗೆ ಇಸ್ಲಾಮಿಕ್ ದಾಳಿಯಾಗಿದ್ದು, ಇದು ಟರ್ಕಿಯ ಖಲೀಫರ ಪರವಾಗಿ ತಿಂಗಳುಗಳ ಕಾಲ ನಡೆದು, ಅಫ್ಘಾನಿಸ್ತಾನದ ಸೈನ್ಯಕ್ಕಾಗಿ ಕಾಯುತ್ತಿತ್ತು. ವಾಸ್ತವವಾಗಿ, ಇದು ಇಸ್ಲಾಮಿಕ್ ರಾಜ್ಯವನ್ನು ಗುರಿಯಾಗಿಸಿತ್ತು" ಎಂದು ಹಿಂದೂ ಐಕ್ಯವೇದಿ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದೆ. ತಮ್ಮ ಫೇಸ್ ಬುಕ್ ಪುಟದಲ್ಲಿ ಕೆ.ಪಿ.ಶಶಿಕಲಾ ಅವರು ಹಿಂದೂಗಳು ಆಸ್ತಿ, ಘನತೆ ಮತ್ತು ಧಾರ್ಮಿಕ ಪೂಜಾ ಸ್ಥಳಗಳನ್ನು ಕಳೆದುಕೊಂಡಿರುವುದು ಅಲ್ಲಿನ ಮಾಪಿಳ್ಳೆಗಳಿಂದ ಮತ್ತು ಮಾಪಿಳ್ಳೆ ಗಲಭೆಯಲ್ಲಿ "ಸಂಪೂರ್ಣ ನರಮೇಧ" ನಡೆದಿದೆ ಎಂದು ಆರೋಪಿಸಿರುವರು. ಕೇರಳದ ಆಡಳಿತರೂಢ ಪಕ್ಷಗಳು ಗಲಭೆಕೋರರನ್ನು ಮತಬ್ಯಾಂಕ್ ಗಾಗಿ ಮತಿ ವಿಕಲ್ಪಗೊಳಿಸಿದರು. ಮಾಪ್ಪಿಳ್ಳೆ ಗಲಭೆಯನ್ನು ಸ್ವಾತಂತ್ರ್ಯ ಹೋರಾಟವನ್ನಾಗಿ ಪರಿವರ್ತಿಸಿದರು ಮತ್ತು ಅವರಿಗೆ ಪಿಂಚಣಿ ಸೇರಿದಂತೆ ಪ್ರಯೋಜನಗಳನ್ನು ನೀಡಿದರು ಎಂದು ಪೆÇೀಸ್ಟ್ ಆರೋಪಿಸಿದೆ.
"ಅಲಿ ಮೊಹಮ್ಮದ್ ನೌಷಾದ್ ಅಲಿ, ಮೊಹಮ್ಮದ್ ಶಕೀಬ್ ಮತ್ತು ಮೊಹಮ್ಮದ್ ನಯಾಜ್ ಅವರನ್ನೊಳಗೊಂಡ ಸಂಶೋಧನೆ ಮತ್ತು ಸಂಪಾದಕೀಯ ತಂಡವು ಪ್ರಸ್ತುತ ನಿಘಂಟಿನ ಈ ಇತಿಹಾಸಪೂರ್ವ ವಿರೂಪವನ್ನು ನಡೆಸಿತು. ಇದು ಸಂತ್ರಸ್ತರಾದ ಜನರಿಗೆ ಎಸೆದ ಕ್ರೌರ್ಯವಾಗಿದೆ." ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ನಿಘಂಟು ಮತ್ತು ಸಂಸ್ಕøತಿ ಇಲಾಖೆ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಇಲಾಖೆಯನ್ನು "ತಮ್ಮ ತಪ್ಪನ್ನು ಸರಿಪಡಿಸಲು" ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈ ಪೆÇೀಸ್ಟ್ ಕರೆ ನೀಡಿತು. ವಾರಿಯನ್ ಕುನ್ನತ್ತೆ ಕುಞÂ್ಞ ಅಹಮ್ಮದ್ ಮತ್ತು ಅಲಿ ಮುಸ್ಲಿಯಾರ್ ಅವರನ್ನು ಪಟ್ಟಿಯಿಂದ ಹೊರಗಿಡಬೇಕು ಮತ್ತು ಈ ಪಟ್ಟಿಯನ್ನು ಹೊಂದಿರುವ ಪುಸ್ತಕವನ್ನು ಹಿಂಪಡೆಯಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಮದು ತಿಳಿಸಲಾಗಿದೆ.