ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಸಿಪಿಎಂ ನಡೆಸುತ್ತಿರುವ ಆಕ್ರಮಣ ರಾಜಕೀಯದ ಎದುರಾಗಿ ಪೆÇಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ನೋಟಕರಷ್ಟೇ ಆಗಿರುವುದನ್ನು ಪ್ರತಿಭಟಿಸಿ ಬದಿಯಡ್ಕ ಪೆÇಲೀಸ್ ಠಾಣಾ ಪರಿಸರದಲ್ಲಿ ಸೋಮವಾರ ಕಾಂಗ್ರೆಸ್ಸ್ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಕೆ ಪಿ ಕುಂಞ ಕಣ್ಣನ್ ಉದ್ಘಾಟಿಸಿದರು. ಕೇರಳ ಪೆÇಲೀಸರು ಸರ್ಕಾರದ ಬೆಂಗಾವಲಾಗಿ ನಿಂತಿದೆ ಎಂದು ಅವರು ಆರೋಪಿಸಿದರು. ಅಕ್ರಮ ರಾಜಕೀಯ ಕೊನೆಗಾಣಿಸಿದ್ದಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡುವರು ಎಂದು ಅವರು ಎಚ್ಚರಿಕೆ ನೀಡಿದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಎನ್ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ ಮಾತನಾಡಿದರು.ಮುಖಂಡರಾದ ಶ್ಯಾಮ್ ಪ್ರಸಾದ್ ಮಾನ್ಯ, ಗಂಗಾಧರ ಗೊಳಿಯಡ್ಕ, ಅಬ್ಬಾಸ್, ಖಾದರ್ ಮಾನ್ಯ , ಶಾಫಿ ಗೋಳಿಯಡ್ಕ, ಶಾಫಿ ಗೊಳಿಯಡಿ, ಕೇಶವ ಬದಿಯಡ್ಕ, ಮ್ಯಾಥ್ಯೂಸ್, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು. ನಾಸರ್ ಬಣ್ಪುತ್ತಡ್ಕ ಸ್ವಾಗತಿಸಿ ವಂದಿಸಿದರು.