ಬದಿಯಡ್ಕ: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದ ನ್ಯಾಯವಾದಿ ಐ.ಸುಬ್ಬಯ್ಯ ರೈ ಅವರಿಗೆ ಅಭಿನಂದನೆ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಪಯ್ಯಲಡ್ಕ ಅವರ ಅಧಿಕಾರ ಪದಗ್ರಹಣ ಸಮಾರಂಭ ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಕಾರ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ನಾರಾಯಣ ಮಣಿಯಾಣಿ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಕುಂಜಾರ್ ಮೊಹಮ್ಮದ್ ಹಾಜಿ, ಸಿ. ಗಂಗಾಧರ ಗೋಳಿಯಡ್ಕ, ಖಾದರ್ ಮಾನ್ಯ, ಮನಾಫ್ ನುಳ್ಳಿ ಪ್ಪಾಡಿ, ಶ್ಯಾಮ್ ಪ್ರಸಾದ್ ಮಾನ್ಯ, ಮ್ಯಾಥ್ಯೂಸ್ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಪದಾಧಿಕಾರಿಗಳಾದ ಶಾಫಿ ಗೋಳಿಯಡ್ಕ, ಚಂದ್ರಹಾಸ ಮಾಸ್ತರ್, ಕುಮಾರ ನಾಯರ್, ಶಾಫಿ ಗೊಳಿಯಡಿ, ಶಾಫಿ ಪಯ್ಯಲಡ್ಕ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.