ನವದೆಹಲಿ: ಕೋವಿಡ್ 19 ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕಾಗಿ ಜನರು ಆಯುರ್ವೇದದ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.
ಸಿಐಐ ಏರ್ಪಡಿಸಿದ್ದ 'ರೋಗನಿರೋಧಕತೆಗಾಗಿ ಆಯುರ್ವೇದ' ಘೋಷಣೆಯ ಆನ್ ಲೈನ್ ಜಾಗತಿಕ ಆಯುರ್ವೇದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಆಯುರ್ವೇದ ದೇಹದಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಆಯುರ್ವೇದ ಕೇವಲ ಒಂದು ವ್ಯವಸ್ಥೆಯಲ್ಲ, ಬದಲಿಗೆ ಜೀವನದ ಸಿದ್ಧಾಂತ. ಆಯುರ್ವೇದ ನಿಸರ್ಗದ ಭಾಗವಾಗಿದ್ದು,ಜನರು ಅದರೊಂದಿಗೆ ಸಹಬಾಳ್ವೆಯಿಂದ ಬಾಳಬೇಕು ಎಂದರು.
ಆಯುರ್ವೇದ ದೇಹದ ತ್ರಿದೋಷಗಳು ಮತ್ತು ನೈಸರ್ಗಿಕ ಅಂಶಗಳ ನಡುವೆ ಪರಿಪೂರ್ಣ ಸಮಾನತೆ ಕಾಪಾಡಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಜನರು ಹೆಚ್ಚಾಗಿ ಆಯುರ್ವೇದ ಬಳಸಿಕೊಳ್ಳಬೇಕು ಎಂದು ಹೇಳಿದರು.