ಕಾಸರಗೋಡು: ರೋಗ ಲಕ್ಷಣವಿಲ್ಲದ ಮನೆಗಳಲ್ಲಿ ಚಿಕಿತ್ಸೆಯಲ್ಲಿರುವ ಜಿಲ್ಲೆಯ ರೋಗಿಗಳ ಸಂಖ್ಯೆ 1000 ಮೀರಿದೆ. ಸೆ. 3 ರ ವರದಿಯನ್ವಯ ಜಿಲ್ಲೆಯಲ್ಲಿ 1006 ಮಂದಿ ಲಕ್ಷಣ ರಹಿತ ಕೋವಿಡ್ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂತಹ ಬೃಹತ್ ಚಿಕಿತ್ಸಾ ಯೋಜನೆಯನ್ನು ಜಾರಿಗೆ ತಂದ ರಾಜ್ಯದ ಮೊದಲ ಜಿಲ್ಲೆಯೂ ಕಾಸರಗೋಡು ಆಗಿರುವುದು ವಿಶೇಷತೆಯಾಗಿದೆ.
ಜಿಲ್ಲೆಯಲ್ಲಿ ಆಗಸ್ಟ್ 12 ರಂದು ಇಂತಹ ಮನೆಗಳಲ್ಲೇ ನೀಡುವ ಚಿಕಿತ್ಸಾ ಯೋಜನೆ ಆರಂಭಗೊಂಡಿತ್ತು. ಯೋಜನೆಯಡಿಯಲ್ಲಿ, ಕೋವಿಡ್ ಧನಾತ್ಮಕ ರೋಗಿಗಳ ಪಟ್ಟಿಯನ್ನು ಆಯಾ ಆರೋಗ್ಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತದೆ. ಮತ್ತು ವಾರ್ಡ್ ಮಟ್ಟದ ನಿರ್ವಹಣಾ ಸಮಿತಿಗಳು ಆರೋಗ್ಯ ಕಾರ್ಯಕರ್ತರೊಂದಿಗೆ ರೋಗಿಗಳ ಮನೆಗಳಿಗೆ ಭೇಟಿ ನೀಡಿ ಪ್ರತ್ಯೇಕ ಚಿಕಿತ್ಸಾ ಸೌಲಭ್ಯವಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಕೋವಿಡ್ ಬಾಧಿತನಾಗಿದ್ದು ಯಾವುದೇ ಲಕ್ಷಣಗಳಿಲ್ಲದಿದ್ದರೆ, ಜಿಲ್ಲಾ ವೈದ್ಯಕೀಯ ಅಧಿಕಾರಿಯ ಅನುಮತಿಯೊಂದಿಗೆ ಮನೆಯಲ್ಲಿ ಒಳರೋಗಿ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಕಿರಿಯ ಆರೋಗ್ಯ ತನಿಖಾಧಿಕಾರಿಗಳ ತಂಡವನ್ನು ವಿಶೇಷವಾಗಿ ತರಬೇತಿ ನೀಡಿ ರೋಗಿಗಳ ತನಿಖೆಗಾಗಿ ಜಿಲ್ಲಾ ನಿಯಂತ್ರಣ ಘಟಕ ನಿಯೋಜಿಸಲಾಗಿದೆ. ರೋಗಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಒತ್ತಡವನ್ನು ನಿವಾರಿಸಲು ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಆಪ್ತ ಸಮಾಲೋಚನಾ ಸೇವೆಗಳು ಲಭ್ಯವಿದೆ. ರೋಗಿಗಳಿಗೆ ರಕ್ತದೋತ್ತಡ, ಫಲ್ಸ್ ರೇಟ್ ಗಳನ್ನು ಸ್ವಯಂ ನಿರೀಕ್ಷಿಸಲು ತರಬೇತಿಯೊಂದಿಗೆ ಸ್ಥಳೀಯ ಗ್ರಾ.ಪಂ.ಅಧಿಕೃತರು ಓಪ್ಟಿ ಮೀಟರ್ ಸಲಕರಣೆಗಳನ್ನು ಒದಗಿಸಲಾಗಿದೆ. ಸಮಸ್ಯೆಗಳಿರುವ ಜನರನ್ನು ಪ್ರಥಮ ಚಿಕಿತ್ಸಾ ಕೇಂದ್ರಗಳಿಗೆ ಅಥವಾ ಇತರ ಕೋವಿಡ್ ಆಸ್ಪತ್ರೆಗಳಿಗೆ ವರ್ಗಾಯಿಸಲು ಸೌಲಭ್ಯಗಳು ಲಭ್ಯವಿದೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಕಳೆದ ಆರು ತಿಂಗಳಿನಿಂದ ರಾಜ್ಯಕ್ಕೇ ಮಾದರಿಯಾಗಿ ಜಿಲ್ಲಾ ಆರೋಗ್ಯ ಇಲಾಖೆಯು ಸಾರ್ವಜನಿಕ ಬೆಂಬಲದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ರೋಗಲಕ್ಷಣವಿಲ್ಲದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯವನ್ನು ಕೈಗೊಳ್ಳುವ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಮಾರ್ಗದರ್ಶಿಯಾಗಿ ಮಾಡಿ ತೋರಿಸಿದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ.ವಿ.ರಾಮದಾಸ್ ಹೇಳಿರುವರು.