ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಈ ನಡುವೆ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಕಾಣಿಸಿಕೊಂಡಿದ್ದು ಭಾರತೀಯ ನೌಕಾಪಡೆ ಕಂಡು ಹೆದರಿ ಹಿಂದಕ್ಕೆ ಹೋಗಿದೆ.
ಮಲಕ್ಕಾ ಜಲಸಂಧಿಯಲ್ಲಿ ಚೀನಾದ ಸಂಶೋಧನಾ ಹಡಗೊಂದು ಹಿಂದೂ ಮಹಾಸಾಗರದ ಭಾರತದ ಜಲಗಡಿಯೊಳಗೆ ಬಂದಿದ್ದು ಈ ಪ್ರದೇಶದಲ್ಲಿ ನೌಕಾಸೇನೆಯ ಯುದ್ಧ ಹಡಗನ್ನು ಕಂಡು ಚೀನಾದ ಹಡಗು ಹಿಂದಕ್ಕೆ ತೆರಳಿದೆ.
ಕಳೆದ ಆಗಸ್ಟ್ ನಲ್ಲಿ ಚೀನಾದ ಯುವಾನ್ ವಾಂಗ್ ಹಡಗು ಭಾರತದ ಜಲಗಡಿಯೊಳಗೆ ಪ್ರವೇಶಿಸಿತ್ತು ಎಂದು ನೌಕಾಪಡೆ ಇದೀಗ ದೃಢಪಡಿಸಿದೆ.
ಭಾರತೀಯ ನೌಕಾಪಡೆಯ ಚಲನವಲನಗಳ ಮೇಲೆ ನಿಗಾ ಇಡುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಇದೀಗ ಯುವಾನ್ ವಾಂಗ್ ನ ಚಟುವಟಿಕೆಗಳ ಮೇಲೆ ನೌಕಾಪಡೆ ನಿಗಾ ಇರಿಸಿದೆ ಎಂದು ಮಾಹಿತಿ ನೀಡಿದೆ.