ಬದಿಯಡ್ಕ:
ಬದಿಯಡ್ಕ ಪೇಟೆ ಇಂದು ಹಾಗೂ ನಾಳೆ ಮುಚ್ಚುಗಡೆಗೊಳ್ಳಲಿದೆ.
ಬದಿಯಡ್ಕ ಪೇಟೆ ಸಹಿತ ಪರಿಸರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಸಂಪರ್ಕ ಮೂಲಕ ವ್ಯಾಪಿಸುತ್ತಿರುವುದರಿಂದ ಈ ಕ್ರಮ ಕ್ಯೆಗೊಳ್ಳಲಾಗುತ್ತಿದೆ. ಮೇಲಿನ ಪೇಟೆ-ಪೆರಡಾಲ
ರಸ್ತೆಯನ್ನು ನಿನ್ನೆಯೇ ಮುಚ್ಚಲಾಗಿದೆ. ಒಂದು ಬದಿ ಪಟ್ಟಾಜೆ ಜಂಕ್ಷನ್ ಹಾಗೂ ಮತ್ತೊಂದು ಬದಿ ಬದಿಯಡ್ಕ ಪೆರಡಾಲ ಕ್ರಾಸ್ ಗಳಲ್ಲಿ ರಸ್ತೆ ತಡೆ ನಿರ್ಮಿಸಲಾಗಿದೆ.
ಪಂಚಾಯತಿಯ ಓರ್ವೆ ಉದ್ಯೋಗ ಖಾತರಿ ನೌಕರೆಗೆ ಕೋವಿಡ್ ದ್ರಢಪಟ್ಟ ಹಿನ್ನೆಲೆಯಲ್ಲಿ ಇವರ ಸಂಪರ್ಕದಲ್ಲಿದ್ದ 15 ಮಂದಿ ಕಾರ್ಮಿಕರನ್ನು ನಿಗಾದಲ್ಲಿರಿಸಲಾಗಿದೆ.