HEALTH TIPS

ಚಂದಮಾಮ' ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದ ಕೆಸಿ ಶಿವಶಂಕರ್ ನಿಧನ

    ಚೆನ್ನೈ: ಒಂದೆರಡು ಪೀಳಿಗೆಯ ಹಿಂದಿನವರಿಗೆ ಮನರಂಜನೆಯ ಆಧಾರವಾಗಿರುತ್ತಿದ್ದ ಚಂದಮಾಮ ಕಥೆಗಳಲ್ಲಿ ಬರುವ ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದ ಕೆ.ಸಿ ಶಿವಶಂಕರ್ (97) ಸೆ.30 ರಂದು ಇಹಲೋಕ ತ್ಯಜಿಸಿದ್ದಾರೆ. 

      ಚೆನ್ನೈ ನ ನಾಗಿ ರೆಡ್ಡಿ ಅವರು ಪ್ರಾರಂಭಿಸಿದ್ದ ಚಂದಮಾಮ ಅಥವಾ ಅಂಬುಲಿಮಾಮ ನಿಯತಕಾಲಿಕೆಗಳಲ್ಲಿ ಶಿವಶಂಕರ್ ಬರೊಬ್ಬರಿ 60 ವರ್ಷಗಳ ಕಾಲ ಕೆಲಸ ಮಾಡಿದ ಕೀರ್ತಿ ಹೊಂದಿದ್ದಾರೆ. 

       ಪ್ರಾರಂಭದಲ್ಲಿ ಮೂರು ಭಾಷೆಗಳಲ್ಲಿದ್ದ ಚಂದಮಾಮ ಕೆಲವೇ ಸಮಯದಲ್ಲಿ 12 ಭಾಷಗೆಳಲ್ಲಿ ಪ್ರಕಟಗೊಂಡ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. 

      ತಮಿಳುನಾಡಿನ ಈ ರೋಡ್ ನ ಸಣ್ಣ ಗ್ರಾಮವೊಂದರಲ್ಲಿ ಹುಟ್ಟಿದ್ದ ಶಿವಶಂಕರ್, ತಮ್ಮ 10 ನೇ ವಯಸ್ಸಿನಲ್ಲಿ ಕಿರಿಯ ಸಹೋದರನೊಂದಿಗೆ ನಗರ ಪ್ರದೇಶಕ್ಕೆ ಬಂದು ಕಾರ್ಪೊರೇಷನ್ ಶಾಲೆಗೆ ಸೇರ್ಪಡೆಗೊಂಡು ವ್ಯಾಸಂಗ ಮುಂದುವರೆಸಿದ್ದರು. 

      ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಶಿಕ್ಷಕರು, ಗುರುಗಳ ಸಲಹೆ ಮೇರೆಗೆ ಸರ್ಕಾರಿ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ಚಿತ್ರಕಲಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. 

        1946 ರಲ್ಲಿ ಪದವಿ ಪಡೆದ ಶಿವಶಂಕರ್, ಹಿರಿಯ ಸಹಪಾಠಿ ಕಲೈ ಮಗಳ್ ನಿಯತಕಾಲಿಕೆಯಲ್ಲಿ ಉದ್ಯೋಗಕ್ಕೆ ಸೇರುವಂತೆ ಸಲಹೆ ನೀಡಿದ್ದರು ಹಾಗೂ ಅಲ್ಲಿಯೇ 5 ವರ್ಷಗಳು ಸೇವೆ ಸಲ್ಲಿಸಿದ ಬಳಿಕ 1951 ರಲ್ಲಿ ನಾಗಿ ರೆಡ್ಡಿ ಅವರ ಅಂಬುಲಿ ಮಾಮ ನಿಯತಕಾಲಿಕೆಯನ್ನು ಸೇರಿದ್ದರು. ಅಲ್ಲಿಂದ ಹಿಂತಿರುಗಿ ನೋಡದ ಶಿವಶಂಕರ್, ಚಂದಮಾಮ ಕಥೆಗಳ ಪಾತ್ರಗಳ ಚಿತ್ರಗಳಿಗೆ ಜೀವ ತುಂಬಿ ತಮ್ಮದೇ ಛಾಪು ಮೂಡಿಸಿ ಖ್ಯಾತಿ ಪಡೆದಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries