ಮಂಜೇಶ್ವರ: ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ - ಶರತ್ ಲಾಲ್ ಕೊಲೆಪ್ರಕರಣದ ಕಡತವನ್ನು ಸಿಬಿಐಗೆ ಹಸ್ತಾಂತರಿಸದ ಕ್ರೈಂಬ್ರಾಂಚ್ ಪೆÇೀಲೀಸರ ಕ್ರಮದ ವಿರುದ್ಧ ಯೂತ್ ಕಾಂಗ್ರೆಸ್ ನಡೆಸಿದ ಮಾರ್ಚ್ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಮಂಜೇಶ್ವರ ಪೆÇಲೀಸ್ ಠಾಣೆಗೆ ಗುರುವಾರ ಮಾರ್ಚ್ ನಡೆಯಿತು.
ಮಂಜೇಶ್ವರ ಅಸೆಂಬ್ಲಿ ಯೂತ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಮಾರ್ಚ್ ನ್ನು ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೇರಳದಲ್ಲಿ ಹಿಂಸಾ ರಾಜಕೀಯ ತಾಂಡವಾಡುತ್ತಿದೆ. ಕೊಲೆ ರಾಜಕೀಯವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಸಿಪಿಎಂ ಗೂಂಡಾ ಪಕ್ಷವಾಗಿ ಜನಸಾಮಾನ್ಯರನ್ನು ತಾಂಡವಾಡುತ್ತಿವೆ. ಚಿನ್ನಕಳ್ಳಸಾಗಾಣಿಕೆಯಂತಹ ದೇಶದ್ರೋಹ ಕೃತ್ಯದಲ್ಲಿ ಸರ್ಕಾರವೇ ಭಾಗಿಯಾಗಿದ್ದು, ಕೇಂದ್ರವನ್ನಾಳುತ್ತಿರುವ ಬಿಜೆಪಿ ಒಳಒಪ್ಪಂದ ಮಾಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆಯೆಂದು ಆರೋಪಿಸಿದರು. ಕೃಪೇಶ್ - ಶರತ್ ಲಾಲ್ ಪ್ರಕರಣ ಸಿಬಿಐ ಕೈಗೆತ್ತಿಕೊಂಡಿದ್ದು, ಸಿಪಿಎಂ ಕೊಲೆಗಡುಕರು ಜೈಲು ಸೇರುವ ಕಾಲ ಸಮೀಪಿಸುತ್ತಿದೆ ಎಂದು ಅವರು ಹೇಳಿದರು.
ಯೂತ್ ಕಾಂಗ್ರೆಸ್ ಅಸೆಂಬ್ಲಿ ಸಮಿತಿ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯ ಭಾಷಣೆಗೈದರು. ನೇತಾರರಾದ ನಾಸರ್ ಮೊಗ್ರಾಲ್, ಮೂಸ.ಡಿ.ಕೆ, ಸುಧಾಕರ ಯು, ಶರೀಫ್ ಅರಿಬೈಲು, ತಮೀಮ್ ಮಂಜೇಶ್ವರ, ಹಮೀದ್ ಕಣಿಯೂರು, ನವಾಝ್, ತಾರನಾಥ ಮುಂತಾದವರು ನೇತೃತ್ವ ನೀಡಿದರು. ಶರೀಫ್ ಸ್ವಾಗತಿಸಿ, ಇಕ್ಬಾಲ್ ಕಳಿಯೂರು ವಂದಿಸಿದರು.