HEALTH TIPS

ಇತರ ರಾಜ್ಯಗಳಿಗೆ ಸಂಚಾರ ನಡೆಸಲು ಯಾವುದೇ ತಡೆಗಳಿಲ್ಲ : ಜಿಲ್ಲಾಧಿಕಾರಿ-ಆದರೂ ಇದೆಯೊಂದು ಅಸ್ಪಷ್ಟತೆ!

 

           ಕಾಸರಗೋಡು: ಇತರ ರಾಜ್ಯಗಳಿಗೆ ಸಂಚಾರ ನಡೆಸಲು ಯಾವುದೇ ತಡೆಗಳಿಲ್ಲ.  ನೌಕರಿ ಸಂಬಂಧ ದಿನನಿತ್ಯ ಕರ್ನಾಟಕಕ್ಕೆ ತೆರಳಿ ಮರಳುವ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ಪ್ರತ್ಯೇಕ ನೋಂದಣಿ, ಪಾಸ್ ಇತ್ಯಾದಿ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.

           ಇಂದು ನಡೆದ ಕೊರೊನಾ ಕೋರ್ ಸಮಿತಿ ಆನ್‍ಲೈನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಈ ವಿಚಾರ ಪ್ರಕಟಸಿದರು. 

    ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಿರುವ, ಕಾಸರಗೋಡು ಜಿಲ್ಲೆಗೆ ದಿನನಿತ್ಯ ಬಂದು, ಹೋಗುವ ಮಂದಿ ತಲಾ 21 ದಿನಗಳಿಗೊಮ್ಮೆ ಕೋವಿಡ್ 19 ಜಾಗ್ರತಾ ಪೆÇೀರ್ಟಲ್‍ನಲ್ಲಿ ಆಂಟಿಜೆನ್ ತಪಾಸಣೆ ಸರ್ಟಿಫೀಕೆಟ್ ಅಪ್‍ಲೋಡ್ ನಡೆಸಬೇಕು. ಇವರು ಜಾಲ್ಸೂರು, ಪೆರ್ಲ, ಪಾಣತ್ತೂರು, ಮಾಣಿಮೂಲೆ-ಬಂದಡ್ಕ ರಸ್ತೆಗಳ ಮೂಲಕವೂ ಕರ್ನಾಟಕಕ್ಕೆ ನಿತ್ಯ ಸಂಚಾರ ನಡೆಸಬಹುದು. ಸರಕು ವಾಹನಗಳ ಸಹಿತ ವಾಹನಗಳಿಗೆ ಈ ರಸ್ತೆಗಳಲ್ಲಿ ತಡೆ ಇರುವುದಿಲ್ಲ. ಇತರ ರಾಜ್ಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದು, ಈಗ ಕಾಸರಗೋಡು ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಆಗಮಿಸುವ ಮಂದಿಗೆ ಪಾಸ್ ಅಗತ್ಯವಿಲ್ಲ. ಕೋವಿಡ್ 19 ಪೆÇೀರ್ಟಲ್ ನಲ್ಲಿ ಆಂಟಿಜೆನ್ ತಪಾಸಣೆ ನಡೆಸಿ ಫಲಿತಾಂಶ ಸರ್ಟಿಫಿಕೆಟ್ ಅಪ್ ಲೋಡ್ ನಡೆಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

      ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಐ.ಸಿ.ಎಂ.ಆರ್.ನ ಆದೇಶ ಪ್ರಕಾರ 14 ದಿನಗಳ ಕ್ವಾರೆಂಟೈನ್ ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬೊಟ್ಟು ಮಾಡಿರುವರು.  ಕೋವಿಡ್ 19 ಜಾಗ್ರತಾ ವೆಬ್ ಪೆÇೀರ್ಟಲ್ ನೋಂದಣಿ ನಡೆಸಿದ ಮಂದಿ ರಾಷ್ಟ್ರೀಯ ಹೆದ್ದಾರಿ 66 ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಮುಕ್ತಗೊಳಿಸಲಾದ 4 ಗಡಿ ರಸ್ತೆಗಳ ಮೂಲಕ ತೆರಳಿ, ಮರಳ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿರುವರು.

      ಕೇಂದ್ರ ಸರಕಾರ ಘೋಷಿಸಿರುವ ಅನ್ ಲಾಕ್ 4 ಸಂಬಂಧ ರಾಜ್ಯ ಸರಕಾರದ ಆದೇಶವೂ ಲಭಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ 24 ತಾಸಿನೊಳಗೆ ಹೋಗಿ ಮರಳುವವರಿಗೆ ಕ್ವಾರೆಂಟೈನ್ ಅಗತ್ಯವಿಲ್ಲ. ಗಡಿ ಪಂಚಾಯತ್‍ಗಳಲ್ಲಿ ನೆಲೆಸಿರುವ ಮಂದಿಗೆ ಸಮೀಪದ ಪಂಚಾಯತ್‍ಗಳಿಗೆ ತೆರಳುವ ನಿಟ್ಟಿನಲ್ಲಿ ಗುರುತು ಚೀಟಿ ಹಾಜರುಪಡಿಸಿದರೆ ಸಾಕು. ಕೋವಿಡ್ ಸೋಂಕು ಹೆಚ್ಚಳ ಸಂಬಂಧ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆಯನ್ನು ಕೇರಳ-ಕರ್ನಾಟಕ ಗಡಿ ಪಂಚಾಯತ್‍ಗಳ ಜನಪ್ರತಿನಿಧಿಗಳು ಮಾತುಕತೆ ನಡೆಸಿ ನಿರ್ಧರಿಸುವರು ಎಂದು ಸಭೆ ತಿಳಿಸಿದೆ.

        ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಡಿ.ವೈ.ಎಸ್.ಪಿ.ಬಾಲಕೃಷ್ಣನ್ ನಾಯರ್ ಪಿ., ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 

     ಆದರೂ ಏನೋ ಅಸ್ಪಷ್ಟತೆ?:

    ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಜನ ಸಾಮಾನ್ಯರ ಮಧ್ಯೆ ಮಡುಗಟ್ಟಿದ ಬೇಗುದಿ ಕಟ್ಟೆಯೊಡೆಯ ತೊಡಗಿದ್ದು ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿದೆ. ಕೇಂದ್ರ ಸರ್ಕಾರ, ರಾಜ್ಯದ ಘನತವೆತ್ತ ಉಚ್ಚ ನ್ಯಾಯಾಲಯವು ಅಂತರಾಜ್ಯ ಮುಕ್ತ ಸಂಚಾರ ನಡೆಸಲು ತಡೆನೀಡಬಾರದೆಂಬ ಆದೇಶ ನೀಡಿದ್ದರೂ ಕಾಸರಗೋಡು ಜಿಲ್ಲಾಡಳಿತ ಅಂತಹದೊಂದು ಆದೇಶ ಪಾಲನೆಗೆ ನಿಧಾನಗತಿ, ನಿರಾಸಕ್ತಿ ವಹಿಸುತ್ತಿದೆ. ಇಂದು ನಡೆದ ಕೋವಿಡ್ ನಿಯಂತ್ರಣ ಸಮಿತಿ ಸಭೆಯಲ್ಲೂ ಇದರ ಪ್ರತಿಫಲನ ಕಂಡುಬಂದಂತೆ ತೋರುತ್ತಿದೆ. ಪೋರ್ಟರ್ ನೋಂದಣಿಗಳಂತಹ ಅಸಂಬದ್ದತೆ ಗೊಂದಲಗಳಿಗೂ ಕಾರಣವಾಗಿದೆ. ಗಡಿಗಳಿರುವ ಪಂಚಾಯತಿ ಹೊರತುಪಡಿಸಿ ಇತರ ಪಂಚಾಯತಿಗಳ ಜನರಿಗೆ ಸಂಚರಿಸಲು ಅನುಮತಿ ಇಲ್ಲ ಮೊದಲಾದ ಗುಮ್ಮಗಳು ಜನಸಾಮಾನ್ಯರ ಕೋಪಕ್ಕೆ ಕಾರಣವಾಗುತ್ತಿದೆ. 

    ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳೇ ಇಲ್ಲದಿದ್ದು ಮಂಗಳೂರಲ್ಲಿ ಮಾತ್ರ ಇರುವುದೆಂದಾದರೆ ಈಪರಿಯ ನಿಬಂಧನೆಗಳಿಗೆ ಅರ್ಥ ಬರುತ್ತಿತ್ತು. ಆದರೆ ಎರಡೂ ಜಿಲ್ಲೆಗಳಲ್ಲೂ ಕೋವಿಡ್ ದಿನನಿತ್ಯ ವರದಿಯಾಗುತ್ತಿದೆ. ಆ ಬಗ್ಗೆ ಜನಸಾಮಾನ್ಯರು/ ಪ್ರಯಾಣಿಕರೇ ಕಾಳಜಿ ವಹಿಸಬೇಕಲ್ಲದೆ ಸರ್ಕಾರ, ಆಡಳಿತ ಯಂತ್ರ ಬೆದರಿಸುವುದು ಎಷ್ಟು ಸರಿಯೆಂಬುದು ವೇದ್ಯವಾಗುತ್ತಿಲ್ಲ. 

    ಜೊತೆಗೆ......

   ಕಾಸರಗೋಡಿನ ಅಸಂಖ್ಯಾತ ಮಂದಿ ಇಂದು ಜೀವನ ಸಾಗಿಸುವುದು ದಕ್ಷಿಣ ಕನ್ನಡ ಸಹಿತ ವಿವಿಧ ಕರ್ನಾಟಕದ ಜಿಲ್ಲೆಗಳಲ್ಲಿ. ಈಗಾಗಲೇ ಅನೂಹ್ಯ ಗಳಷ್ಟು ಮಂದಿ ನಿಯಂತ್ರಣದ ಕಾರಣ ಉದ್ಯೋಗ ಕಳಕೊಂಡಿದ್ದಾರೆ. ಇನ್ನೂ ಇಂತಹ ನಿಯಂತ್ರಣಗಳು ಮುಂದುವರಿದರೆ ಹೊಟ್ಟೆಗಿಲ್ಲದೆ ದೀವಾಳಿಗಳಾಗಿ ಸಾಯುವುದು ನಿಶ್ಚಿತವೆನ್ನುವುದೂ ನಗ್ನಸತ್ಯ.    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries