ಕಾಸರಗೋಡು: ನಿಬಂಧನೆಗಳ ಮೂಲಕ ಕಾಸರಗೋಡು ಮಾರುಕಟ್ಟೆ ಚಟುವಟಿಕೆಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.
ದಿನ ಬಿಟ್ಟು ದಿನ ಅರ್ಧ ದಷ್ಟು ಮಂದಿ (ಶೇ 50) ಮಾತ್ರ ಎಂಬ ಕ್ರಮದಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಬೇಕು. ಮಾರುಕಟ್ಟೆಗೆ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಬೇರೆ ಬೇರೆ ಮಾರ್ಗ ವ್ಯವಸ್ಥೆ ಮಾಡಲಾಗುವುದು. ಟೋಕನ್ ಮೂಲಕ ಏಕಕಾಲಕ್ಕೆ 50 ಮಂದಿ ಮಾತ್ರ ಪ್ರವೇಶ ನಡೆಸುವಂತೆ ಮಾಡಲಾಗುವುದು. ಬೆಳಗ್ಗೆ 7.30ರ ವರೆಗೆ ರಖಂ ವ್ಯಾಪಾರಿಗಳು,ಬಳಿಕ ಸಾರ್ವಜನಿಕರು ಮಾರುಕಟ್ಟೆ ಪ್ರವೇಶಿಸಬೇಕು. ಮಾರಕಟ್ಟೆಗೆ ಸಾಮಾಗ್ರಿ ಹೇರಿಕೊಂಡು ಬರುವ ವಾಹನಗಳು ಅರ್ಧ ತಾಸಿನ ಅವಧಿಯಲ್ಲಿ ಸಾಮಾಗ್ರಿ ಇಳಿಸಿ ಮರಳಬೇಕು. ನಂತರ ತಾಳಿಪಡ್ಪು ಮೈದಾನದಲ್ಲಿ ಪಾಕಿರ್ಂಗ್ ನಡೆಸಬೇಕು ಎಂದವರು ತಿಳಿಸಿರುವರು.
ಎಚ್.ಡಿ.ಸಿ. ಪರೀಕ್ಷೆಗೆ ಅನುಮತಿ:
ಸೆ.22ರಿಂದ ಅ.3 ವರೆಗೆ ಸಹಕಾರಿ ಕಾಲೇಜುಗಳಲ್ಲಿ ನಡೆಯುವ ಎಚ್.ಡಿ.ಸಿ., ಬಿ.ಎಂ. ಪರೀಕ್ಷೆಗಳನ್ನು ಕೋವಿಡ್ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಿ ನಡೆಸಲು ಸಭೆ ನಿರ್ಧರಿಸಿದೆ. ಆದರೆ ಪರೀಕ್ಷೆ ನಡೆಯುವ ಮಾಹಿತಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮತ್ತು ಸ್ಟೇಷನ್ ಹೌಸ್ ಅಧಿಕಾರಿಗೆ ನೀಡಬೇಕು.
ಎ.ಸಿ. ಬಳಸಿದರೆ ಕ್ರಮ:
ಜಿಲ್ಲೆಯ ಕೆಲವು ಜ್ಯುವೆಲ್ಲರಿಗಳಲ್ಲಿ ಎ.ಸಿ. ಬಳಸುತ್ತಿರುವುದು ಗಮನಕ್ಕೆ ಬಂದಿರುವುದಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದು, ಅವರ ಆದೇಶ ಪ್ರಕಾರ ಅಂಥಾ ಸಮಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ.
ಸರ್ಕಾರಿ ಸಿಬ್ಬಂದಿ ಮಾದರಿಯಾಗಬೇಕು:
ಸಂಚಾರವನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಜನ ಗುಂಪು ಸೇರದಂತೆ ನೋಡಿಕೊಳ್ಳುವ ಮೂಲಕ ಸರಕಾರಿ ಸಿಬ್ಬಂದಿ ಕೋವಿಡ್ ಸಂಹಿತೆ ಪಾಲನೆಗೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪ ಜಿಲ್ಲಾಧಿಕಾರಿ ಡಿ.ಆರ್.ಶಿಲ್ಪಾ, ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸುದನನ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.