ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಕ್ಷೇತ್ರ ಪರ್ಯಟನೆಯ ಭಾಗವಾಗಿ ಶನಿವಾರ ಸಂಜೆ ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಶ್ರೀ ಆಶ್ರಯ ಆಶ್ರಮಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ 50ನೇ ಜನ್ಮ ದಿನಾಚರಣೆಯ ಸಂದರ್ಭ ಸಂಕಲ್ಪಿಸಿದಂತೆ ಆಶ್ರಯಕ್ಕೆ ನೀಡಲುದ್ದೇಶಿಸಿದ್ದ ರೂ.25 ಸಾವಿರ ರೂ.ಗಳ ಚೆಕ್ ನ್ನು ಆಶ್ರಯದ ಟ್ರಸ್ಟಿ ಗೋಪಾಲ ಚೆಟ್ಟಿಯಾರ್ ಅವರಿಗೆ ಈ ಸಂದರ್ಭ ಹಸ್ತಾಂತರಿಸಲಾಯಿತು.
ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರೀಮಠ ಈ ಹಿಂದಿನಂತೆ ಮುಂದೆಯೂ ಬದ್ದತೆಯಿಂದ ಕಾರ್ಯವೆಸಗಲಿದೆ. ಆಶ್ರಿತರ ಪಾಲಿಗೆ ವರದಾನವಾಗಿ ಬೆಳೆದುಬಂದಿರುವ ಆಶ್ರಯದ ಚಟುವಟಿಕೆ ಮಾದರಿಯಾಗಿದ್ದು ಶ್ರೀಮಠದ ಸಂಪೂರ್ಣ ಬೆಂಬಲ ಇರಲಿದೆ ಎಂದು ಶ್ರೀಸಚ್ಚಿದಾನಂದ ಭಾರತಿ ಶ್ರೀಗಳು ಈ ಸಂದರ್ಭ ತಿಳಿಸಿದರು.
ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಈ ಹಿಂದಿನ ಯತಿಗಳು ಕೈಗೊಂಡಿದ್ದ ಮಾರ್ಗವನ್ನು ಮುಂದುವರಿಸುವ ಶ್ರೀಸಚ್ಚಿದಾನಂದ ಭಾರತಿಗಳ ಪರಿಕಲ್ಪನೆಗಳ ಬಗ್ಗೆ ಈ ಸಂದರ್ಭ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಸವಿವರ ಮಾಹಿತಿಗಳನ್ನು ನೀಡಿದರು. ಅ.28 ರಂದು ಎಡನೀರು ಮಠದಲ್ಲಿ ನೆರವೇರಲಿರುವ ಪೀಠಾರೋಹಣ ಕಾರ್ಯಕ್ರಮಕ್ಕೆ ಸಜ್ಜನ ಧರ್ಮ ವಿಶ್ವಾಸಿಗಳು ಆಗಮಿಸಿ ಪಾಲ್ಗೊಳ್ಳಬೇಕೆಂದು ರವೀಶ ತಂತ್ರಿ ಕರೆನೀಡಿದರು.
ಆಶ್ರಮದ ಟ್ರಸ್ಟಿ ಗೋಪಾಲ ಚೆಟ್ಟಿಯಾರ್, ಗಣೇಶಕೃಷ್ಣ ಅಳಕ್ಕೆ, ಶಿವಶಂಕರ ಕೋರಿಕ್ಕಾರ್, ಸವಿತಾ ಟೀಚರ್, ಪ್ರಮುಖರಾದ
ಶಂಕರ ಡಿ., ಕೃಷ್ಣ ಮಣಿಯಾಣಿ, ಪ್ರೇಮ ಕುಮಾರಿ, ರಮೇಶ ಕಳೇರಿ, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ರಾಜೇಂದ್ರ ಕಲ್ಲೂರಾಯ, ರಾಘವೇಂದ್ರ ಕಲ್ಲೂರಾಯ, ಗೋಪಾಲಕೃಷ್ಣ ಅಡಿಗ ಮೊದಲಾದವರು ಉಪಸ್ಥಿತರಿದ್ದರು. ಆಶ್ರಯದ ಟ್ರಸ್ಟಿ ಶ್ರೀಕೃಷ್ಣ ಭಟ್ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.