ಉಪ್ಪಳ: ಕೇರಳವನ್ನೇ ಬೆಚ್ಚಿಬೀಳಿಸಿದ ಹಲವು ಕ್ರಿಮಿನಲ್ ಅಪರಾಧಗಳ ಹಿನ್ನೆಲೆ ಇರುವ ವ್ಯಕ್ತಿ, ಸರ್ಕಾರಿ ಅಂಬ್ಯುಲೆನ್ಸ್ ಚಾಲಕ ನೌಫಲ್ ಕರೊನಾ ಬಾಧಿತ ಸ್ತ್ರೀ ಯನ್ನು ಅತ್ಯಾಚಾರವೆಸಗಿದ ಹೀನಕೃತ್ಯವನ್ನು ಖಂಡಿಸಿ ಇಂದು (ಮಗಳವಾರ) ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಮಂಜೇಶ್ವರ ಪ್ರಖಂಡ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಉಪ್ಪಳದ ಕೈಕಂಬ ಜಂಕ್ಷನ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಅಪರಾಹ್ನ 3 ರಿಂದ ನಡೆಯಲಿರುವ ಪ್ರತಿಭಟನಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕುಕೃತ್ಯದ ವಿರುದ್ದ ಧ್ವನಿಯೆತ್ತಬೇಕೆಂದು ವಿಹಿಂಪ ಪ್ರಕಟಣೆಯಲ್ಲಿ ತಿಳಿಸಿದೆ.