ತಿರುವನಂತಪುರ: ಇತರ ರಾಜ್ಯಗಳಿಂದ ಕೇರಳ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಸರ್ಕಾರದ ಜಾಗ್ರತಾ ಪೋರ್ಟರ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಕ್ಕೆ ಮೊದಲು ಬಸ್ ಏರುವ ಮೊದಲು ಜಾಗ್ರತಾ ಪೊರ್ಟರ್ ನಲ್ಲಿ ನೋಂದಾಯಿಸಿದ ದಾಖಲೆ ಪತ್ರಗಳನ್ನು ಬಸ್‍ನ ಸಂಬಂಧಪಟ್ಟ ಅಧಿಕೃತರಿಗೆ ತೋರಿಸಬೇಕು. ಯಾವುದೇ ದಾಖಲೆಪತ್ರಗಳಿಲ್ಲದವರನ್ನು ಯಾವ ಕಾರಣಕ್ಕೂ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ರಾಜ್ಯ ಕೆಎಸ್‍ಆರ್‍ಟಿಸಿ ಅಧಿಕೃತರು ಗುರುವಾರ ತಿಳಿಸಿದ್ದಾರೆ.
ಈ ಮಧ್ಯೆ, ಕರ್ನಾಟಕ ರಾಜ್ಯ ಸಾರಿಗೆ ನಿಗಮಮವು (ಕೆಎಸ್‍ಆರ್‍ಟಿ) ಓಣಂ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಕೇಂದ್ರಗಳಿಂದ ಕೇರಳಕ್ಕೆ ನಡೆಸುತ್ತಿರುವ ವಿಶೇಷ ಪ್ರಯಾಣ ಸೌಕರ್ಯಗಳನ್ನು ಸೆಪ್ಟೆಂಬರ್ 8 ರವರೆಗೆ ವಿಸ್ತರಿಸಿದೆ. ಈ ತಿಂಗಳು 7 ರವರೆಗೆ ಬೆಂಗಳೂರು ಮತ್ತು ಮೈಸೂರಿನಿಂದ ಕೇರಳಕ್ಕೆ ಸೇವೆ ಇರುತ್ತದೆ. ಸೆಪ್ಟೆಂಬರ್ 8 ರಂದು ಕೇರಳದಿಂದ ಬೆಂಗಳೂರಿಗೆ ಈ ಸೇವೆ ಲಭ್ಯವಾಗಲಿದೆ ಎಂದು ಕರ್ನಾಟಕ ಆರ್‍ಟಿಸಿ ತಿಳಿಸಿದೆ.