ಕಾಸರಗೋಡು: ಸಂಸ್ಕಾರಯುತ ಜೀವನ ಶೈಲಿಗೆ ಮಾತೆಯರು ಕಂಕಣ ತೊಡಬೇಕು. ಪಾಶ್ಚಿಮಾತ್ಯ ಜೀವನ ಶೈಲಿಗೆ ನಾವು ಪ್ರಾಧಾನ್ಯ ನೀಡಬಾರದು. ಹಿರಿಯರು ಹೇಳಿಕೊಟ್ಟಂತಹ ಮಾರ್ಗದಲ್ಲೇ ನಾವು ನಡೆದಾಗ ಮಾತ್ರ ಸನಾತನ ಧರ್ಮ ಉಳಿವು ಸಾಧ್ಯ ಎಂದು ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿಯ ಪ್ರಮುಖ್ ಜಲಜಾಕ್ಷಿ ಟೀಚರ್ ಅವರು ಹೇಳಿದರು.
ಸಂಘ ಗ್ರಾಮದ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದ ಸಾಂಸ್ಕøತಿಕ ವೇದಿಕೆಯಲ್ಲಿ ಆಯೋಜಿಸಿದ ಮಾತೃ ಸಂಗಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಎನ್ನುವುದು ಮತವಲ್ಲ. ಅದೊಂದು ಧರ್ಮ, ಸಂಸ್ಕಾರ. ಮನೆ ಮನೆಯಲ್ಲೂ ಮಹಾಭಾರತ, ರಾಮಾಯಣ, ಭಗವದ್ಗೀತೆ ಪಾರಾಯಣ ನಡೆಯಬೇಕು. ಈ ಮೂಲಕ ಭಾರತೀಯ ಸಂಸ್ಕøತಿಯನ್ನು ಕಾಪಿಡಲು ಸಾಧ್ಯ. ಮಕ್ಕಳಿಗೆ ಚಿಕ್ಕಂದಿನಿಂದಲೇ ಭಾರತೀಯ ಸಂಸ್ಕಾರ, ಸಂಸ್ಕøತಿಯ ಪಾಠವನ್ನು ಬೋಧಿಸಬೇಕೆಂದು ಮುಖ್ಯ ಪ್ರವಚನ ನೀಡಿದ ಮುಖ್ಯ ಅತಿಥಿ ಮಹಿಳಾ ಐಕ್ಯವೇದಿ ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಓಮನಾ ಮುರಳಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶೀಲಾ ಏಕನಾಥ ಮಲ್ಯ ಅಧ್ಯಕ್ಷತೆ ವಹಿಸಿದರು. ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ್ ಹಾಗು ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್, ವೆಂಕಟ್ರಮಣ ಬಾಲಗೋಕುಲ ಶಿಕ್ಷಕಿ ಶ್ರೀಲತಾ ಅವರು ಭಾರತೀಯ ಸಂಸ್ಕಾರವನ್ನು, ಸಂಸ್ಕøತಿಯನ್ನು ಮಕ್ಕಳಿಗೆ ತಿಳಿಹೇಳಬೇಕೆಂದರು. ಕಾಸರಗೋಡು ನಗರಸಭಾ ಸದಸ್ಯರಾದ ಸಂಧ್ಯಾ ಶೆಟ್ಟಿ, ಜಾಹ್ನವಿ, ಉಮಾ ಕಡಪ್ಪುರ, ಶಂಕರ ಕೆ. ಮೊದಲಾದವರು ಉಪಸ್ಥಿತರಿದ್ದರು. ಗುರೂಜಿ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಾಂತಾ ಕೃಷ್ಣ ಸ್ವಾಗತಿಸಿದರು. ಜೀತ ಪ್ರಮೋದ್ ವಂದಿಸಿದರು. ಕಾವ್ಯ ಕುಶಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಜೆ.ಪಿ.ನಗರ ಫ್ರೆಂಡ್ಸ್, ಕನ್ನಡ ಗ್ರಾಮ ಫ್ರೆಂಡ್ಸ್ ಹಾಗು ಮಹಿಳಾ ಸಮಿತಿ ನೆರವು ನೀಡಿತು. ಕಾರ್ಯಕ್ರಮದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ನಗರಸಭಾ ವಿಪಕ್ಷ ನಾಯಕ ರಮೇಶ್, ಕಾಸರಗೋಡು ತಾಲೂಕು ಬಾಲಗೋಕುಲ ಪ್ರಮುಖ್ ಜಯರಾಮ ಶೆಟ್ಟಿ, ಪುರುಷೋತ್ತಮ ನಾೈಕ್, ಪತ್ರಕರ್ತ ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.