ಕುಂಬಳೆ: ಕುಂಬಳೆ ಓಬಿಸಿ ಮೋರ್ಚಾದ ವತಿಯಿಂದ ಕುಂಟಾಂಗಿರಡ್ಕ ಸಂಪಿಗೆಕಟ್ಟೆ ಸಮೀಪದ ನಾರಾಯಣ ಎಂಬವರಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ 70ನೇ ವರ್ಷದ ಜನ್ಮ ದಿನದ ಅಂಗವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಓಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬ್ಳೆ, ಮಂಜೇಶ್ವರ ಮಂಡಲ ಸಮಿತಿ ಬಿಜೆಪಿ ಕಾರ್ಯದರ್ಶಿ ರಮೇಶ್ ಭಟ್, ಓಬಿಸಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಮಧುಸೂದನ ದೇವೀನಗರ, ಏನ್. ಕೆ. ನಾರಾಯಣ, ಬೂತ್ ಕಾರ್ಯದರ್ಶಿ ಧನರಾಜ್, ಕುಂಟಾಂಗಿರಡ್ಕ ಸಂಪಿಗೆಕಟ್ಟೆ ಪರಿಸರದವರಾದ ಗಣೇಶ್ ರಾವ್ ಉಪಸ್ಥಿತರಿದ್ದರು.