ಮಧೂರು: ಕಾಸರಗೋಡು ಸಹಿತ ಕೇರಳದಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ಕಾಸರಗೋಡಿನ ಮಧುವಾಹಿನಿ ಹೊಳೆ ತುಂಬಿಹರಿಯುತ್ತಿದೆ. ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣಕ್ಕೆ ಶನಿವಾರ ಸಾಯಂಕಾಲ ನೆರೆನೀರು ನುಗ್ಗಿದೆ. ಆಗಸ್ಟ್ ತಿಂಗಳಲ್ಲೂ ದೇವಸ್ಥಾನಕ್ಕೆ ಭಾರಿ ಪ್ರಮಾಣದಲ್ಲಿ ನೆರೆನೀರು ನುಗ್ಗಿತ್ತು. ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕಾಮಗಾರಿಗೂ ಅಡಚಣೆಯುಂಟಾಗುತ್ತಿದೆ.