HEALTH TIPS

ತುಳು ಭಾಷೆ-ಕಲೆ-ಸಂಸ್ಕೃತಿಗೆ ಚಿನ್ನದ ಚೌಕಟ್ಟು : ತುಳು ಪ್ರೇಮಿಗಳ ಕನಸು ನನಸು: ಕೇರಳ ತುಳುಭವನ ಉದ್ಘಾಟನೆ

 

       ಕಾಸರಗೋಡು: ತುಳು ಭಾಷೆ-ಕಲೆ-ಸಂಸ್ಕೃತಿಗೆ ಚಿನ್ನದ ಚೌಕಟ್ಟು ಒದಗುತ್ತಿದೆ. ಕಾಸರಗೋಡು ಜಿಲ್ಲೆಯ ತುಳು ಪ್ರೇಮಿಗಳ ಕನಸು ನನಸಾಗುತ್ತಿದೆ. ಕೇರಳ ತುಳುಭವನ ಉದ್ಘಾಟನೆ ಪೂರ್ಣವಾಗಿದೆ.

     ಕಾಸರಗೋಡು ಜಿಲ್ಲೆಯ ಮೂಲಭಾಷಿಗರ ಕಲೆ-ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ, ಶಾಶ್ವತ ಮೆರುಗು ನೀಡುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ಕೇರಳ ತುಳು ಅಕಾಡೆಮಿಯ ಪ್ರಧಾನ ಕೇಂದ್ರವಾಗಿರುವ ತುಳುಭವನ ಇದೀಗ ಲೋಕಾರ್ಪಣೆಗೆ ಸಜ್ಜಾಗಿದೆ. ಮಂಜೇಶ್ವರ ತಾಲೂಕಿನ ಹೊಸಂಗಡಿ ಬಳಿಯ ಕಡಂಬಾರು ಗ್ರಾಮದ ದುರ್ಗಿಪಳ್ಳದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ ತುಳುಭವನ. ಕಂದಾಯ ಇಲಾಖೆ ನೀಡಿರುವೊಂದು ಎಕ್ರೆ ಜಾಗದಲ್ಲಿ ತುಳುಭವನ ಎಂಬ ನಾಮಕರಣದೊಂದಿಗೆ ಈ ಸಾಂಸ್ಕೃತಿಕ ಕೇಂದ್ರ ತಲೆಎತ್ತಿನಿಂತಿದೆ. 

      2007 ಸೆ.3ರಂದು ಅಂದಿನ ಮುಖ್ಯಮಂತ್ರಿ ವಿ.ಎಸ್.ಅಚ್ಯತಾನಂದನ್ ಕೇರಳ ತುಳು ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಮಾಜಿ ಶಾಸಕ ಸಿ.ಎಚ್.ಕುಂಞಂಬು ಅವರು ತುಳು ಅಕಾಡೆಮಿ ಸ್ಥಾಪನೆ, ತುಳು ಭವನ ನಿರ್ಮಾಣ ಇತ್ಯಾದಿ ಚಟುವಟಿಕೆಗಳಿಗೆ ಅಹೋರಾತ್ರಿ ಯತ್ನ ನಡೆಸಿ ಯಶಸ್ವಿಯಾಗಿದ್ದರು. ರಾಜ್ಯ ಸರಕಾರದ ಒಂದು ಸಾವಿರ ದಿನಗಳ ಆಡಳಿತೆ ಸರಣಿ ಕಾರ್ಯಕ್ರಮಗಳ ಅಂಗವಾಗಿ 2019 ಫೆ.27ರಂದು ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರು ಈ ಕೇಂದ್ರದ ಶಿಲಾನ್ಯಾಸ ನಡೆಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲೇ ಈ ಸಂಸ್ಥೆಯ ಉದ್ಘಾಟನೆಯೂ ನಡೆಯಬೇಕಿತ್ತು. ಆದರೆ ಕೋವಿಡ್ 10 ಕಟ್ಟುನಿಟ್ಟುಗಳ ಹಿನ್ನೆಲೆಯಲ್ಲಿ ಲೋಕಾರ್ಪಣೆಯ ದಿನಾಂಕ ಮುಂದೂಡಬೇಕಾಗಿ ಬಂದಿತ್ತು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ತಿಳಿಸಿದರು. 

     ತ್ವರಿತಗತಿಯಲ್ಲಿ ನಡೆದ ನಿರ್ಮಾಣ ಚಟುವಟಿಕೆಯ ಫಲವಾಗಿ ಆರಂಭಿಸಿದ ಒಂದೇ ವರ್ಷದಲ್ಲಿ ತುಳುಭವನದ ಮೊದಲ ಹಂತದ ನಿರ್ಮಾಣ ಪೂಗೊರ್ಂಡಿತ್ತು. 25 ಲಕ್ಷ ರೂ. ಇದಕ್ಕಾಗಿ ಮೀಸಲಿರಿಸಲಾಗಿತ್ತು. ಹಿರಿಯ ಸಂಶೋಧಕ, ತುಳು ವಿದ್ವಾಂಸ ಡಾ. ವೆಂಕಟರಾಜ ಪುಣಿಂಚತ್ತಾಯ ಅವರು ಕೇರಳ ತುಳು ಅಕಾಡೆಮಿಯ ಸ್ಥಾಪಕಾಧ್ಯಕ್ಷರಾಗಿದ್ದವರು. ಅವರ ಹೆಸರಲ್ಲಿ ಈ ಕಟ್ಟಡದಲ್ಲಿ ಗ್ರಂಥಾಲಯವಿರುವುದು. ಸಭೆ ನಡೆಸಲು ಎಕ್ಸಿಕ್ಯೂಟಿವ್ ಕೊಠಡಿ, ಅಕಾಡೆಮಿಯ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಕೊಠಡಿ, ಸಿಬ್ಬಂದಿಯ ಕೊಠಡಿ ಇತ್ಯಾದಿಗಳು ಈ ಕಟ್ಟಡದಲ್ಲಿವೆ. ಜಿಲ್ಲಾ ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ಈ ಕಟ್ಟಡದ ನಿರ್ಮಾಣ ಚಟುವಟಿಕೆಗಳು ನಡೆದಿವೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ, ಸಿಬ್ಬಂದಿ, ಜನಪ್ರತಿನಿಧಿಗಳ ಬೆಂಬಲದೊಂದಿಗೆ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆದಿವೆ ಎಂದು ಉಮೇಶ್ ಎಂ.ಸಾಲಿಯಾನ್ ತಿಳಿಸಿದರು.

         2ನೇ ಹಂತವಾಗಿ ತುಳು ಸಂಶೋಧನೆ ಕೇಂದ್ರ, ವಸ್ತು ಸಂಗ್ರಹಾಲಯದ ನಿರ್ಮಾಣ:

    ಈ ಕೇಂದ್ರದ 2ನೇ ಹಂತವಾಗಿ ತುಳು ಸಂಶೋಧನೆ ಕೇಂದ್ರ, ವಸ್ತು ಸಂಗ್ರಹಾಲಯದ ನಿರ್ಮಾಣ ನಡೆಯಲಿದೆ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ತಿಳಿಸಿದರು. 

     ಮಂಜೇಶ್ವರದ ಹಿಂದಿನ ಶಾಸಕ ದಿ. ಪಿ.ಬಿ.ಅಬ್ದುಲ್ ರಝಾಕ್ ಅವರ ನಿಧಿಯಿಂದ 45 ಲಕ್ಷ ರೂ. ಇದಕ್ಕಾಗಿ ಮಂಜೂರು ಮಾಡಿದ್ದರು. 

           3ನೇ ಹಂತವಾಗಿ ತುಳು ಕಲ್ಚರಲ್ ಥಿಯೇಟರ್:

   ಈ ಕೇಂದ್ರದಲ್ಲಿ 3ನೇ ಹಂತವಾಗಿ ಕಲ್ಚರಲ್ ಥಿಯೇಟರ್ ನಿರ್ಮಿಸಲಾಗುವುದು. ತುಳು ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಇದು ಸ್ಥಾಪನೆಗೊಳ್ಳಲಿದ್ದು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಗೆ ಒಂದು ಕೋಟಿ ರೂ. ನ ಯೋಜನೆಯನ್ನು ಇದಕ್ಕಾಗಿ ಸಲ್ಲಿಸಲಾಗಿದೆ ಎಂದು ಉಮೇಶ್ ಎಂ.ಸಾಲ್ಯಾನ್ ಹೇಳಿದರು. 


          ತುಳು ಲಿಪಿ ಕಲಿಕೆಗೆ ಆನ್ ಲೈನ್ ಸೌಲಭ್ಯ: 

   ಕೇರಳ ತುಳು ಭವನದ ನೇತೃತ್ವದಲ್ಲಿ ಸಾರ್ವಜನಿಕರಿಗಾಗಿ ತುಳು ಲಿಪಿ ಕಲಿಕೆಗೆ ಆನ್ ಲೈನ್ ಸೌಲಭ್ಯ ಸಿದ್ಧಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಜೊತೆಯಲ್ಲಿ ತುಳು ಪ್ರೇಮಿ ಸಾರ್ವಜನಿಕರಿಗೆ ಇದು ಪ್ರಯೋಜನೆಕಾರಿಯಾಗಲಿದೆ ಎಂದು ಉಮೇಶ್ ಎಂ.ಸಾಲ್ಯಾನ್ ನುಡಿದರು. 

     ಸರಳ ವಿಧಾನದ ಪಠ್ಯಪದ್ಧತಿಯನ್ನು ಈ ನಿಟ್ಟಿನಲ್ಲಿ ಸಿದ್ಧಗೊಳಿಸಲಾಗತ್ತಿದೆ. ತುಳುಭವನದ ವೆಬ್ ಸೈಟ್, ಯೂಟ್ಯೂಬ್ ಚಾನೆಲ್ ಗಳ ಮೂಲಕ ಜಗತ್ತಿನ ಯಾವ ಮೂಲೆಯಲ್ಲೂ ತುಳು ಕಲಿಕೆ ಸುಲಭವಾಗುವ ರೀತಿ ತುಳು ಲಿಪಿ ಕಲಿಕೆಗೆ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಉಮೇಶ್ ಎಂ.ಸಾಲ್ಯಾನ್ ಹೇಳಿದರು. 

     ತುಳು ಭಾಷೆ-ಸಂಸ್ಕೃತಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರದೊಂದಿಗೆ ವೈವಿಧ್ಯಮಯ ರೀತಿಯ ಚಟುವಟಿಕೆಗಳನ್ನು ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಜಾನಪದ ಉತ್ಸವಗಳು, ಆಚರಣೆಗಳು, ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ, ತೆಂಬೆರೆ ತ್ರೈ ಮಾಸಪತ್ರಿಕೆ ಇತ್ಯಾದಿಗಳು ತುಳು ಸಂಸ್ಕೃತಿಯನ್ನು ಪ್ರಧಾನ ವಾಹಿನಿಗೆ ತರುವಲ್ಲಿ ಪೂರಕವಾಗಿವೆ ಎಂದವರು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries