ಉಪ್ಪಳ: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ 70 ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ವತಿಯಿಂದ ಪೈವಳಿಕೆ ಪಂಚಾಯತಿ ಪೆರ್ವೋಡಿಯಲ್ಲಿ ಸಮಾಜದ ಹಿರಿಯರು ಆಗಿರುವ 90 ರ ಸದಾನಂದ ಆಳ್ವ ಪೆರ್ವೋಡಿ ಇವರನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಸದಾನಂದ ಆಳ್ವ ಅವರು 1988 ರಿಂದ 1994 ರ ವರೆಗೆ ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು. 1986 ರಲ್ಲಿ ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ಅಧ್ಯಕ್ಷ ರಾಗಿ ಜವಾಬ್ದಾರಿ ವಹಿಸಿದ್ದರು. ಬಾಯಾರ್ ಹಾಗೂ ಬದಿಯಡ್ಕ ನೀರ್ಚಾಲ್ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಸಾಮಾಜಿಕವಾಗಿ ಜನಸೇವೆಗೆಯ್ದ ವ್ಯಕ್ತಿಯಾಗಿರುವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇವರನ್ನು ಬಂಧಿಸಲು ಪೆÇಲೀಸ್ ವ್ಯಾಪಕ ಶೋಧ ನಡೆಸಿದ್ದರೂ ಬಂಧಿಸಲು ಸಾಧ್ಯವಾಗಿರಲಿಲ್ಲ.
ಈ ಸಂದರ್ಭದಲ್ಲಿ ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕುಲಾಲ್, ಗ್ರಾಮ ಪಂಚಾಯತಿ ಸದಸ್ಯರಾದ ಕಿಶೋರ್ ಕುಮಾರ್ ನಾಯ್ಕ್, ಶೇಖರ್ ಕುಲಾಲ್, ರಾಧಾಕೃಷ್ಣ ರೈ, ಅನಿಲ್ ಕುಮಾರ್ ಪೆರ್ವೋಡಿ ಮೊದಲಾದವರು ಉಪಸ್ಥಿತರಿದ್ದರು.