HEALTH TIPS

ಮಾಯಿಪ್ಪಾಡಿ ಡಯಟ್ ನೂತನ ಕಟ್ಟಡ ನಿರ್ಮಾಣ ಚಟುವಟಿಕೆಗಳ ಉದ್ಘಾಟನೆ

 

      ಮಧೂರು: ಸಾರ್ವಜನಿಕ ಶೈಕ್ಷಣಿಕ ವಲಯದಲ್ಲಿ ರಾಜ್ಯ ಸರ್ಕಾರ ಕ್ರಾಂತಿಕಾರಿ ಬದಲಾವಣೆ ತಂದಿದೆ. ಈ ಬಗ್ಗೆ ಸತತ ಕ್ರಮಗಳನ್ನು ಕೈಗೊಂಡು ಭವಿಷ್ಯದಲ್ಲಿ ಸದೃಡ ಪ್ರಜೆಗಳನ್ನು ರೂಪಿಸುವ ಉತ್ತಮ ಶಿಕ್ಷಣ ಅವಕಾಶವನ್ನು ಒದಗಿಸುತ್ತಿದೆ. ಸೌಲಭ್ಯ ಒದಗಿಸುವುದಕ್ಕಾಗಿ ಒಂದು ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ತಿಳಿಸಿದರು.

       ಮಾಯಿಪ್ಪಾಡಿ ಡಯಟ್ ಸಂಸ್ಥೆಗೆ ಹೆಚ್ಚುವರಿ ಸೌಲಭ್ಯದ ಭಾಗವಾಗಿ ನಿರ್ಮಿಸಲಾಗುವ ಆಡಳಿತೆ ವಿಭಾಗ ಬ್ಲಾಕ್ ಕಟ್ಟಡದ ನಿರ್ಮಾಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

      ಪ್ರಭಾಕರನ್ ಆಯೋಗದ ವರದಿ ಪ್ರಕಾರ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರಿಸುಮಾರು 12 ಕೋಟಿ ರೂ.ನ ಯೋಜನೆ ಅಗತ್ಯವಿದೆ. ಇಷ್ಟು ದೊಡ್ಡ ಮೊಬಲಗು ಸಂಗ್ರಹಕ್ಕೆ ಖಾಸಗಿ ವಲಯದ ಸಹಕಾರ ಸಹಿತ ವಿವಿಧ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು . ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲೂ ಶಿಕ್ಷನ ವಲಯದ ಅಭಿವೃದ್ಧಿಗೆ ಪ್ರತ್ಯೇಕ ಪರಿಶೀಲನೆ ನೀಡಲಾಗುತ್ತಿದೆ ಎಂದರು. 

       ಉತ್ತಮ ಶಿಕ್ಷಕರನ್ನು ಸಿದ್ಧಪಡಿಸುವ ಮಾಯಿಪ್ಪಾಡಿ ಡಯಟ್ ನಲ್ಲಿ ನೂತನ ಕಟ್ಟಡಗಳ ಸಹಿತ ಸೌಲಭ್ಯಗಳು ಲಭ್ಯವಾಗುವುದು ಭವಿಷ್ಯತ್ತಿನ ಶಿಕ್ಷಕ ಸಂದೋಹಕ್ಕೆ ಹೆಚ್ಚುವರಿ ಉತ್ತೇಜನವಾಗಲಿದೆ. ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನುಡಿದರು.  

     ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಅವರು ಮಾತನಾಡಿ ಪ್ರಭಾಕರನ್ ಆಯೋಗದ ವರದಿ ಕಾಸರಗೋಡು ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದರ ಪರಿಹಾರ ನಡೆಯಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಈ ಪರಿಹಾರಕ್ಕೆ ಸಂಬಂಧಿಸಿ ಯೋಜನೆಗಳಿವೆ ಎಂದರು. 

      ಶಾಸಕ ಎನ್.ಎ,ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ಜನಾಂಗದ ಭವಿಷ್ಯವನ್ನು ರಚಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ. ಈ ವಲಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷಭೇದವಿಲ್ಲದ ಸಹಕಾರ ಅಗತ್ಯ ಎಂದರು.  

      ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿದ್ದರು. ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್, ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕೆ.ಪಿ.ಪುಷ್ಪ, ಡಯಟ್ ಪ್ರಾಂಶುಪಾಲ ಡಾ.ಎಂ.ಬಾಲನ್, ಸಮಗ್ರ ಶಿಕ್ಷಣ ಕಾರ್ಯಕ್ರಮ ಸಂಚಾಲಕ ಪಿ.ರವೀಂದ್ರನ್, ಕೇರಳ ಶಿಕ್ಷಣ ರೆಜುವೇಷನ್ ಮಿಷನ್ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್, ಕೈಟ್ ಜಿಲ್ಲಾ ಸಂಚಾಲಕ ಎಂ.ಪಿ.ರಾಜೇಶ್, ಪಂಚಾಯತಿ ಸದಸ್ಯ ಎಸ್.ವಿ. ಅವಿನ್ ಉಪಸ್ಥಿತರಿದ್ದರು. ಲೋಕೋಪಯೋಗಿ ಕಾರ್ಯಕಾರಿ ಇಂಜಿನಿಯರ್ ವಿ.ಪಿ.ಮುಹಮ್ಮದ್ ವರದಿ ವಾಚಿಸಿದರು. 

     ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಮೂರು ಕೋಟಿ ರೂ. ವೆಚ್ಚದಲ್ಲಿಈ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಇದಲ್ಲದೆ ವಿದ್ಯುದೀಕರಣಕ್ಕೆ 15 ಲಕ್ಷ ರೂ. ಮೀಸಲಿರಿಸಲಾಗಿದೆ. ಎರಡು ಅಂತಸ್ತಿನ ಮೂರು ಬ್ಲೋಕ್ ಗಳಿರುವ ಕಟ್ಟಡ ಇದಾಗಿದೆ. ಒಟ್ಟು 2861.355 ಚದರ ಅಡಿ ವಿಸ್ತೀರ್ಣದ ಕಟ್ಟಡವಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶಾಲ ಗ್ರಂಥಾಲಯ, ಕಚೇರಿ, ಸಭಾಂಗಣ, ಪ್ರಯೋಗಹಾಲಯ, ಭೋಜನಾಲಯ, ಪಾಕಿರ್ಂಗ್ ಸೌಲಭ್ಯ ಈ ಕಟ್ಟಡದಲ್ಲಿರುವುವು. ಕಾಸರಗೋಡು ನಿವಾಸಿ ಹಸನ್ ಕುಂಞÂ ಎಂಬವರು ಈ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದಾರೆ. 


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries