HEALTH TIPS

ಅಂತರ್ ರಾಜ್ಯ ನಿರ್ಬಂಧ ಹಿಂಪಡೆಯಬೇಕು-ದಕ್ಷಿಣ ಕನ್ನಡ ಅವಲಂಬಿತ ಕಾಸರಗೋಡು ಗಡಿನಾಡ ಜನರ ಹೊರಾಟ ಸಮಿತಿ ಸುದ್ದಿಗೋಷ್ಠಿಯಲ್ಲಿ ಆಗ್ರಹ

      ಕಾಸರಗೋಡು:
ಕೇಂದ್ರ ಸರಕಾರ ಅನ್ ಲಾಕ್ 4 ನಿದೇ೯ಶ ಪಾಲಿಸುವ೦ತೆ ರಾಜ್ಯ ಮುಖ್ಯ ಕಾಯ೯ದಶಿ೯ಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಂತರ ರಾಜ್ಯ ಪ್ರಯಾಣ ನಿಭ೯ಂಧ ತೆಗೆದು ಹಾಕಬೇಕು ಎಂದುಕನ್ನಡ ಜಿಲ್ಲೆಯನ್ನು ಮಾತ್ರ ಅವಲಂಬಿಸಿರುವ ಕಾಸರಗೋಡು ಜಿಲ್ಲೆಯ ನಿವಾಸಿಗಳ ಗುಂಪು 'ದಕ್ಷಿಣ ಕನ್ನಡ ಅವಲಂಬಿತ ಕಾಸರಗೋಡು ಗಡಿನಾಡ ಜನರ ಹೊರಾಟ ಸಮಿತಿ' 
      ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದೆ.
      ಶಿಕ್ಷಣ, ಉದ್ಯೋಗ, ವ್ಯಾಪಾರ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಕಾಸರಗೋಡಿನಿಂದ ಮಂಗಳೂರಿಗೆ ಪ್ರತಿದಿನ ಸುಮಾರು 40,000 ಜನರು ಪ್ರಯಾಣಿಸುತ್ತಾರೆ ಮತ್ತು ಅವರ ಸಂಬಂಧಿಕರು ಎರಡೂ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ನಿಯಂತ್ರಣವು ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ.
ಕೋವಿಡ್ ಜಾಗ್ರತ ವೆಬ್ ಪೋರ್ಟಲ್‌ನಲ್ಲಿ ಆಂಟಿಜೆನ್ ಟೆಸ್ಟ್ ನೆಗೆಟಿವ್ ಪ್ರಮಾಣಪತ್ರದೊಂದಿಗೆ ಪ್ರತಿದಿನ ನೋಂದಾಯಿಸಿಕೊಳ್ಳುವ ಕ್ರಮ  ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿದಿನ ಪ್ರಯಾಣಿಸುವವರಿಗೆ ತುಂಬಾ ಕಷ್ಟಕರವಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
      ಜಿಲ್ಲೆಯ ನಿರುದ್ಯೋಗಕ್ಕೆ ಪರಿಹಾರವಾಗಿ ಸ್ವ-ಉದ್ಯೋಗವನ್ನು ಕಂಡುಕೊಂಡವರಿಗೆ ಇದು ಶಿಕ್ಷೆಯೇ? ಎಂದು ಅವರು ಪ್ರಶ್ನಿಸಿದರು. ಅಂತರರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕೇರಳ ಜಾರಿಗೊಳಿಸುತ್ತಿಲ್ಲ. ಅನ್ ಲಾಕ್ ಮೂರನೇ ಹಂತದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಲು ಕೇಂದ್ರ ಸರ್ಕಾರದಿಂದ ಬಲವಾದ ಸೂಚನೆಗಳಿದ್ದರೂ, ಅದನ್ನು ಕಾರ್ಯಗತಗೊಳಿಸಲು ಕೇರಳ ಸರ್ಕಾರ ಒಪ್ಪಲಿಲ್ಲ. ಹೈಕೋರ್ಟ್ ಆದೇಶವೂ ಪೂರ್ಣವಾಗಿ ಜಾರಿಯಾಗುತ್ತಿಲ್ಲ. ನ್ಯಾಯಾಲಯದ ಆದೇಶ ಪಾಲಿಸದೆ ತೆರೆದ ರಸ್ತೆಗಳಲ್ಲಿ ಅನಗತ್ಯ ನಿರ್ಬಂಧ ಹೇರಲಾಗುತ್ತಿದೆ. ನಿಯಮಿತ ಪಾಸ್ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೂ ಪೊಲೀಸರು ಪಾಸ್ ಕೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ವಾಹನ ತಪಾಸಣೆಯ ಹೆಸರಿನಲ್ಲಿ ಪ್ರಯಾಣಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಅಂತರರಾಜ್ಯ ಪ್ರಯಾಣಿಕರ ಕಿರುಕುಳವನ್ನು ಕೊನೆಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿತು.
             ಅಂತರ ರಾಜ್ಯ ಪ್ರಯಾಣದ ಪರಿಸ್ಥಿತಿಗಳನ್ನು ತಿಂಗಳಲ್ಲಿ ಏಳು ಬಾರಿ ಬದಲಾಯಿಸಲಾಗಿದೆ. ಆಂಟಿಜೆನ್ ಪರೀಕ್ಷಾ ಫಲಿತಾಂಶಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದು ಕಾಸರಗೋಡು ಡಿಎಂಒ ಸ್ವತಃ ಸ್ಪಷ್ಟಪಡಿಸಿದೆ ಮತ್ತು ಆಂಟಿಜೆನ್ ಪರೀಕ್ಷೆಗೆ ಅದನ್ನು ಏಕೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಥವಾಗಲಿಲ್ಲ ಎಂದು ಪದಾಧಿಕಾರಿಗಳು ಪ್ರಶ್ನೆಸಿದರು ಕೋವಿಡ್ ದಕ್ಷಿಣ ಜಿಲ್ಲೆಗೆ ಹೋಗುವ ಮೂಲಕ ಹರಡುತ್ತಾನೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಕರ್ನಾಟಕದಲ್ಲಿ ನಿಯಂತ್ರಣವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದ್ದರಿಂದ, ರೋಗದ ಹರಡುವಿಕೆ ಹೆಚ್ಚಿಲ್ಲ. ಕೋವಿಡ್ ಏಕಾಏಕಿ ಕರ್ನಾಟಕ ಗಡಿಗಿಂತ ಜಿಲ್ಲೆಯ ಇತರ ಭಾಗಗಳಲ್ಲಿ ಹೆಚ್ಚಾಗಿದೆ ಎಂದು ಅವರು ಹೇಳಿದರು. ಕರ್ನಾಟಕವು ಅಂತರರಾಜ್ಯ ಬಸ್ ಸೇವೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಅದಕ್ಕೆ ಕೇರಳ ಕೂಡ ಸಿದ್ಧವಾಗಬೇಕು. ಎಲ್ಲ ಗಡಿ ರಸ್ತೆಗಳನ್ನು ತೆರೆಯುವಂತೆ ಅವರು ರಾಜ್ಯ ಸರ್ಕಾರವನ್ನು  ಆಗ್ರಹಿಸಿದೆ. ಅಂತರರಾಜ್ಯ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಈ ಸಂದರ್ಭ.
 ಕರೆ ನೀಡಿತು.
     ಸರ್ಕಾರವು ಜನರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಅದು ಸಾಮೂಹಿಕ ಆಂದೋಲನವನ್ನು ಆಯೋಜಿಸುತ್ತದೆ ಎಂದು ಅವರು ಹೇಳಿದರು. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಷ್ಟ್ರೀಯ ಪಕ್ಷಗಳ ಬೆಂಬಲ ಕೋರಿರುವುದಾಗಿ ನಾಯಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಪಿನ್ ದಾಸ್ ನಂಬಿಯಾರ್ - ಸಂಚಾಲಕರು,ಗಣೇಶ್ ಭಟ್ ವಾರಣಾಸಿ - ಸದಸ್ಯರು
 ಬಾಸ್ಕರ ಕಾಸರಗೋಡು -ಸದಸ್ಯರು
 ಹರಿಪ್ರಸಾದ್ ಕಾನ - ಸದಸ್ಯರು ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries