ಕಾಸರಗೋಡು: ಶಿಕ್ಷಕರ ಮೂಲಕ ನಡೆಯುತ್ತಿರುವ ಕೋವಿಡ್ ವಿರುದ್ಧ ಜನಜಾಗೃತಿ ಯೋಜನೆ ಮಾಸ್ಟರ್ ನ ದಾಖಲೀಕರಣದ ಸಿದ್ಧತೆ ನಡೆಯುತ್ತಿದ್ದು, ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ಐ.ಇ.ಸಿ. ಸಂಚಲನ ಸಮಿತಿ ಸಂಚಾಲಕರಾಗಿರುವ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ.ಅವರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದರು.
ಜಿಲ್ಲಾಡಳಿತ ರಚಿಸಿರುವ ಮಾಸ್ಟರ್ ಯೋಜನೆಯ ಅಂಗವಾಗಿ ಮಾಸ್ಟರ್ ವಿಷನ್, ಮಾಸ್ಟರ್ ರೇಡಿಯೋ, ಮಾಸ್ಟರ್ ವಾಹನ ಸಹಿತ ವಿಭಿನ್ನ ಶೈಲಿಯಲ್ಲಿ ಶಿಕ್ಷಕರು ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ಸ್ಥಳೀಯಾಡಳಿತ ಸಂಸ್ಥೆಗಳು ಈ ಚಟುವಟಿಕೆಗಳ ನೇತೃತ್ವ ಹೊಂದಿವೆ. ಈ ಸಂಬಂಧ ಸಮಗ್ರ ದಾಖಲೀಕರಣ ಸಿದ್ಧಗೊಳ್ಳಲಿದೆ. ಈ ವಲಯದಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಸ್ಥಳೀಯಾಡಳಿತ ಸಂಸ್ಥೆಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 9496003201.