ಕಾಸರಗೋಡು: ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಸ್ಥಳೀಯ ಮಟ್ಟದ ಜನಜಾಗೃತಿ ಚುರುಕುಗೊಳಿಸಲು ಜಿಲ್ಲಾ ಮಟ್ಟದ ಐ.ಇ.ಸಿ. ಸಂಚಲನಾ ಸಮಿತಿ ಸಭೆ ತೀರ್ಮಾನಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಪರ್ಕ ಮೂಲಕ ಹರಡುತ್ತಿರುವ ಸೋಂಕಿನನಿಯಂತ್ರಣಕ್ಕೆ ನಗರಸಭೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಜಾಗೃತಿ ಅನಿವಾರ್ಯ ಎಂದವರು ಅಭಿಪ್ರಾಯಪಟ್ಟರು.ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳು ಪಾಲಿಸಬೇಕಾದ ಮತ್ತು ಸಾರ್ವಜನಿಕರುಅನುಸರಿಸಬೇಕಾದ ಕಟ್ಟುನಿಟ್ಟುಗಳನ್ನು ಪ್ರಚಾರಗೊಳಿಸುವ ಹೊಣೆಯನ್ನು ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿಗೆ ನೀಡಲಾಗಿದೆ.ಹೈಯರ್ ಸೆಕೆಂಡರಿ ವಿಭಾಗದ ಪ್ರವೇಶಾತಿ ಮತ್ತು ಹತ್ತನೇ ತರಗತಿ ಸೇಪರೀಕ್ಷೆಯ ಹೊಣೆಗಾರಿಕೆ ಹೊಂದಿರುವ ಶಿಕ್ಷಕರನ್ನುತಾತ್ಕಾಲಿಕವಾಗಿ ಮಾಸ್ಟರ್ ಯೋಜನೆಯ ಚಟುವಟಿಕೆಗಳಿಂದ ಹೊರತುಪಡಿಸಲು ಸಭೆ ನಿರ್ಧರಿಸಿದೆ. ಆದರೆ ಯೋಜನೆಯಹೊಣೆಗಾರಿಕೆಯಿಂದ ಅವರು ಹೊರತಾಗುವುದಿಲ್ಲ ಎಂದು ತಿಳಿಸಲಾಗಿದೆ. ಸಿ.ಎಫ್.ಎನ್.ಟಿ.ಸಿ. ಡಾಟಾ ಎಂಟ್ರಿ ಹೊಣೆಯ ಶಿಕ್ಷಕರುಕೊರೋನಾ ರೋಗಿಗಳನ್ನು ನೇರವಾಗಿ ಸಪರ್ಕಿಸಬೇಕಿಲ್ಲ, ಬದಲಾಗಿ ದೂರವಾಣಿ ಮೂಲಕ ಸಂಪರ್ಕಿಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.