ಕುಂಬಳೆ: ಕೂಲಿ ಕಾರ್ಮಿಕನ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಸಮೀಪದ ಸೀತಾಂಗೋಳಿಯಲ್ಲಿ ನಡೆದಿದೆ.
ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಕೋಡಿಮೂಲೆಯ ಶಂಕರ ( 55) ಮೃತಪಟ್ಟವರು.
ಶನಿವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದ ಶಂಕರ ರಾತ್ರಿಯಾದರೂ ಮನೆಗೆ ಮರಳದಿರುವುದರಿಂದ ಮನೆಯವರು ಹುಡುಕಾಟ ನಡೆಸಿದ್ದರು . ಈ ನಡುವೆ ಇಂದು ( ಆದಿತ್ಯವಾರ ) ಬೆಳಿಗ್ಗೆ ಕೋಡಿಮೂಲೆ ಮೈದಾನ ದಲ್ಲಿ ಮೃತದೇಹ ಪತ್ತೆಯಾಗಿದೆ. ಕಣ್ಣು ಮತ್ತು ಕುತ್ತಿಗೆ ಯಲ್ಲಿ ಗಾಯಗಳು ಕಂಡು ಬಂದಿವೆ. ರಕ್ತದ ಕಲೆಗಳು ಪತ್ತೆಯಾಗಿವೆ . ದಿನಗಳ ಹಿಂದೆ ಶಂಕರ್ ಮತ್ತು ತಂಡದ ಜೊತೆ ವಾಗ್ವಾದ ನಡೆದಿತ್ತು ಎಂಬ ಮಾಹಿತಿ ಪೆÇಲೀಸರಿಗೆ ಲಭಿಸಿದೆ.
ಈ ಪರಿಸರದಲ್ಲಿ ಪಾನಮತ್ತರ ಉಪಟಳ ಕೆಲ ಸಮಯದಿಂದ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದರಿಂದ ಶಂಕರ ರವರ ಸಾವು ಕೊಲೆ ಆಗಿರಬಹುದೇ ಎಂಬ ಸಂಶಯ ತಲೆದೋರಿದೆ. ಕುಂಬಳೆ ಠಾಣಾ ಪೆÇಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.