HEALTH TIPS

ಕಲಾವಿದ ಶಿವಾನಂದ ನಾಟ್ಯಗುರುವಾಗಿ ಪದೋನ್ನತಿ: ಬಜಕೂಡ್ಲು ದೇವಳದಲ್ಲಿ ಯಕ್ಷಗಾನ ನಾಟ್ಯತರಬೇತಿ ಆರಂಭ


     ಪೆರ್ಲ: ಕಟೀಲು ಮೇಳದ ಪ್ರತಿಭಾವಂತ ಯುವ ಕಲಾವಿದ ಶಿವಾನಂದ ಶೆಟ್ಟಿ ಬಜಕೂಡ್ಲು ಅವರು ಪೆರ್ಲ ಸಮೀಪದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ತರಗತಿ ಪ್ರಾರಂಭಿಸಿದ್ದಾರೆ. ಓಣಂ ಸುದಿನವಾದ ಆ.31ರಂದು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವಾನಂದರ ಗುರು, ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಸ್ಥಾಪಕ, ನಾಟ್ಯಾಚಾರ್ಯ ಸಬ್ಬಣಕೋಡಿ ರಾಮಭಟ್ ದೀಪಬೆಳಗಿಸಿ ತರಗತಿ ಉದ್ಘಾಟಿಸಿದರು.


      ಈ ಸಂದರ್ಭ ಮಾತನಾಡಿದ ಅವರು "ಸಂಪ್ರದಾಯ ಬದ್ಧ ನಾಟ್ಯಗಾರಿಕೆಯನ್ನು ಕೈದಾಟಿಸುವಲ್ಲಿ ನನ್ನ ಶಿಷ್ಯ ಶಿವಾನಂದ ಕಾಳಜಿ ತೋರಿ, ತರಗತಿ ಆರಂಭಿಸುತ್ತಿರುವುದು ಹರ್ಷದ ವಿಷಯ. ಯುವ ಕಲಾವಿದರು ತೆಂಕುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ನಾಟ್ಯದ ಪರಿಶುದ್ಧತೆ ಮತ್ತು ಚೆಲುವು ಕಾಪಾಡುವ ಮೂಲಕ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕೈದಾಟಿಸಬೇಕು" ಎಂದು ಶಿಷ್ಯನಿಗವರು ಆಶೀರ್ವಾದ ಇತ್ತರು. ಕಲೆಯ ಮೂಲಕ ಪ್ರಸಿದ್ಧಿಗೆ ಬರಲು ಅಡ್ಡ ದಾರಿಗಳನ್ನು ಅನುಸರಿಸಬಾರದು. ಅಂಥಹ ಖ್ಯಾತಿ, ಜನಪ್ರಿಯತೆಗಳು ಶಾಶ್ವತವಲ್ಲ. ತಾಳ್ಮೆ ಮತ್ತು ನಿಷ್ಠೆಯ ಅಧ್ಯಯನದ ಅರಿವಿನಿಂದ ಮಾಗಿ ಪಳಗುವ ಮೂಲಕವಷ್ಟೇ ಕಲಾವಿದರು ಪ್ರಸಿದ್ಧರಾಗಬೇಕು. ಅದು ಹಂತ ಹಂತವಾಗಿ ಒದಗುತ್ತದೆ. ಎಳೆಯ ವಯಸ್ಸಿನಲ್ಲಿ ದಿಢೀರ್ ಜನಪ್ರಿಯತೆಯ ಹಂಬಲ ಉಂಟಾದರೆ ಅದರಿಂದ ಕಲಾವಿದನ ಏಳಿಗೆ ಮಸುಕಾಗುತ್ತದೆ ಎಂದವರು ನುಡಿದರು.

      ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭಹಾರೈಸಿದರು. ಬಜಕೂಡ್ಲು ದೇವಳದ ಆಡಳಿತ ಮೊಕ್ತೇಸರ ಕೆ.ಕೃಷ್ಣ ಶಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾ.ಪಂ ಸದಸ್ಯ ಉದಯ ಚೆಟ್ಟಿಯಾರ್ ಉಪಸ್ಥಿತರಿದ್ದರು. ಪೆರ್ಲ ಸ.ನಾ. ಹೈಸ್ಕೂಲ್ ಅಧ್ಯಾಪಕ ಉದಯ ಶಂಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೂತನ ನಾಟ್ಯಶಿಕ್ಷಣ ತರಗತಿಯ ವಿದ್ಯಾರ್ಥಿಗಳಿಗೆ ಗುರು ಸಬ್ಬಣಕೋಡಿ ರಾಮಭಟ್ ಮತ್ತು ಶಿವಾನಂದ ಶೆಟ್ಟಿ ಪೆರ್ಲ ಜಂಟಿಯಾಗಿ ಹೆಜ್ಜೆಗಾರಿಕೆಯ ಮೊದಲಪಾಠ ಮಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries