ಮಂಗಳೂರು: ಒಂದು ಕೈಯಲ್ಲಿ ಬರೆಯೋಕೆ ಹಲವರು ಕಷ್ಟಪಡುತ್ತಾರೆ. ಇನ್ನು ಎರಡು ಕೈಯಲ್ಲಿ ಬರೆಯೋದು ಅಂದ್ರೆ ಸುಲಭನಾ! ಆದ್ರೆ ಇಲ್ಲೊಬ್ಬ ಬಾಲೆಗೆ ಅದು ಸುಲಲಿತ. ಕರಾವಳಿಯ ಬಾಲೆಯೊಬ್ಬಳು ತನ್ನ ಎರಡು ಕೈಗಳಲ್ಲಿ ಸುಲಲಿತವಾಗಿ ಬರೆಯುತ್ತಾರೆ. ಮಲ್ಟಿ ಟ್ಯಾಲೆಂಟ್ ಈ ಬಾಲೆ ವರ್ಡ್ ರೆಕಾರ್ಡ್ ಸನಿಹದಲ್ಲಿದ್ದಾಳೆ.ಮಂಗಳೂರಿನ ಈ ಬಾಲೆ ಮಲ್ಟಿ ಟ್ಯಾಲೆಂಟೆಡ್. ಈಕೆ ತನ್ನ ಎರಡು ಕೈಯಲ್ಲಿ ಬರೆದು ಈಗ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಹಾಗೂ ಸುಂದರವಾಗಿ ಏಕ ಕಾಲದಲ್ಲಿ ಎರಡೂ ಕೈಗಳಿಂದ 10 ರೀತಿಯಲ್ಲಿ ಬರೆಯುವ ಮೂಲಕ, ಇದೀಗ ವಿಶ್ವ ದಾಖಲೆ ಮಾಡಿರುವ ಮಂಗಳೂರಿನ ಬಹುಮುಖ ಪ್ರತಿಭೆಯಾದ ಆದಿ ಸ್ವರೂಪಾಳಿಂದ ಪ್ರಪ್ರಥಮವಾಗಿ ಅನಾವರಣಗೊಂಡಿದೆ. ಎರಡು ಕೈನಿಂದ ಒಂದೇ ವಾಕ್ಯವನ್ನು ಬರೆಯುತ್ತಾಳೆ. ಎರಡೆರಡು ಕೆಡೆ ಬರೆಯುವುದು. ಮಿರರ್ ರಿಫ್ಲೆಕ್ಟ್ ಬರವಣೆಗೆ, ಒಂದ ಕೈಯಲ್ಲಿ ಇಂಗ್ಲಿಶ್ ಮತ್ತೊಂದು ಕೈಯಲ್ಲಿ ಕನ್ನಡ ಬರೆಯುತ್ತಾಳೆ. ಒಂದು ನಿಮಿಷಕ್ಕೆ 45 ಪದಗಳನ್ನು ಬರೆಯುವ ಸಾಮರ್ಥ್ಯ ಹೊಂದಿದ್ದಾಳೆ ಈ ಆದಿ ಸ್ವೂರೂಪ. ಇನ್ನು ಎರಡು ಕಡೆ ಬೇರೆ ಬೇರೆ ಸಬ್ಜೆಕ್ಟ್ ಕೂಡ ಬರೆಯಬಲ್ಲವಳಾಗಿದ್ದಾಳೆ.
ವೈಜ್ಞಾನಿಕವಾಗಿ ದೃಢವಾಗಿರುವ ಎಡ ಬಲ ಮೆದುಳುಗಳನ್ನು ಪೂರ್ಣ ಏಕ ಕಾಲಕ್ಕೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಚುರುಕುಗೊಳಿಸಬಲ್ಲ ಈ ತಂತ್ರವು, ರಾಷ್ಟ್ರೀಯ ಹೊಸ ಶಿಕ್ಷಣ ನೀತಿಗೆ ತೆರೆದುಕೊಳ್ಳಲಿರುವ ಶಿಕ್ಷಣ ಕ್ಷೇತ್ರಕ್ಕೊಂದು ಅಪೂರ್ವ ಸಾಧ್ಯತೆಯಾಗಲಿದೆ. ಆದಿ ಎರಡು ಕೈಗಳಲ್ಲಿ ಅತೀ ವೇಗದ ಬರಹಗಾರ್ತಿ ಎಂಬ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಅನ್ನು ಮಾಡಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಈ ರೆಕಾರ್ಡ್ ಘೋಷಣೆ ಮಾಡಿದೆ.ಏಕಕಾಲದಲ್ಲಿ ಎರಡು ಕೈಯಲ್ಲಿ ವೇಗವಾಗಿ ಬರೆದು ವಿಶ್ವ ದಾಖಲೆ ಮಾಡಿದ ಕನ್ನಡತಿ
0
ಸೆಪ್ಟೆಂಬರ್ 17, 2020
ಹತ್ತು ಶೈಲಿಗಳಲ್ಲಿ ಎರಡೂ ಕೈಗಳಲ್ಲಿ ಬರೆಯಬಲ್ಲ ವಿಶಿಷ್ಠತೆಯನ್ನು ಈ ಬಹುಮುಖ ಪ್ರತಿಭೆ ಹೊಂದಿದ್ದಾಳೆ. ತನ್ನ ಎರಡುವರೆ ವರ್ಷ ವಯಸ್ಸಿನಲ್ಲೆ ರಾಜ್ಯಾದಾದ್ಯಂತ ಶಿಕ್ಷಣ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಆದಿ 2019 ರ ತನಕ 1600 ಕ್ಕಿಂತ ಹೆಚ್ಚು ಜಾಥಾ ಕಾರ್ಯಕ್ರಮಗಳಲ್ಲಿ ವಿಶೇಷ ಪ್ರತಿಭಾ ಪ್ರದರ್ಶನವನ್ನು ನೀಡಿದ್ದಾಳೆ. ಕಲಿಸದೆ ಕಲಿಯುವ ಸ್ವರೂಪ ಶಿಕ್ಷಣ ಸ್ವಕಲಿಕಾ ವಿಧಾನದಂತೆ ಒಂದುವರೆ ವರ್ಷ ಪ್ರಾಯದಲ್ಲೆ ಓದಲು, ಎರಡುವರೆ ವರ್ಷ ಪ್ರಾಯದಲ್ಲಿ ದಿನಕ್ಕೆ 30 ಪುಟಗಳಷ್ಟು ಬರೆಯುತ್ತಿದ್ದ ಆದಿ ಎಂದೂ ಶಾಲೆಗೆ ಹೋಗದೆ ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾಳೆ. ಸದ್ಯ ಇದೀಗ 10ನೇ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ 2 ಕೈಯಿಂದ ಬರೆಯಲು ಸಿದ್ಧಳಾಗಿದ್ದಾಳೆ.
ಈಕೆ ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್, ಕಲೆಯಲ್ಲು ನಿಪುಣೆ. ಇನ್ನು ವಿಶೇಷ ಅಂದ್ರೆ ಈಕೆ ಶಾಲೆಗೆ ಹೋಗುತ್ತಿಲ್ಲ. ಈಕೆಯ ತಂದೆಯೆ ಈಕೆಗೆ ಗುರು. ಅದ್ಭುತ ನೆನಪು ಶಕ್ತಿಯ ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್ ಮುಂತಾದ ವಿಷಯಗಳನ್ನು ಅಭ್ಯಾಸ ಮಾಡುತ್ತಿದ್ದಾಳೆ. ಶಾಲೆಗೆ ಹೋಗದೇ ಹತ್ತನ ತರಗತಿಯ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾಳೆ. ಇನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಯತ್ನಿಸುತ್ತಿದ್ದಾಳೆ. ಇಷ್ಟು ಪ್ರತಿಭೆಯ ಕಣಜಕ್ಕೆ ಒಂದು ಆಲ್ ದ ಬೆಸ್ಟ್ ಹೇಳಲೆಬೇಕು.
Tags