ಮಂಜೇಶ್ವರ: ಜೀವನದ ಅತ್ಯಂತ ಸುಂದರವಾದ ಕ್ಷಣಗಳನ್ನು ಹಬ್ಬಗಳು ಮೂಡಿಸುತ್ತಿದ್ದು ಇದು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಜೀವನದ ಮೌಲ್ಯಗಳನ್ನು ಸಂರಕ್ಷಿಸಲು ಹಬ್ಬಗಳು ಸಹಕಾರಿಯಾಗುತ್ತದೆ. ಹಬ್ಬಗಳು ಜನರಲ್ಲಿ ಸಹನೆ,ಪ್ರೀತಿ,ಸಹೋದರತೆ ಮೂಡಿಸುತ್ತದೆ ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಹುಸೈನ್ ಮಾಸ್ತರ್ ತಿಳಿಸಿದರು.
ಇವರು ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪು ಇಲ್ಲಿ ಜರಗಿದ ಓಣಂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೋಣಿಬೈಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಧವ, ರತೀಶ್,ಚರಣ್,ಮಂಜುನಾಥ್, ರುಕ್ಸಾನ,ತೌಶಿನಾ,ವಿವೇಕ್,ನವೀನ್ ಮೊದಲಾದವರು ಭಾಗವಹಿಸಿದ್ದರು. ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಗ್ರಂಥಪಾಲಕಿ ಜಯಶ್ರೀ ವಂದಿಸಿದರು.