ಕಾಸರಗೋಡು: ಕೋವಿಡ್ ಸಂಬಂಧ ಕ್ವಾರೆಂ ಟೈನ್ ಆದೇಶ ಉಲ್ಲಂಘಿಸಿ ಅಲೆದಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಐ.ಸಿ.ಇ. ಸಂಚಲನ ಸಮಿತಿ ಸಭೆ ತಿಳಿಸಿದೆ.
ಕೋವಿಡ್ ಪಾಸಿಟಿವ್ ಖಚಿತಗೊಂಡ ನಂತರ, ರೋಗಿಗಳೊಂದಿಗೆ ಸಂಪರ್ಕ ಹೊಂದಿರುವವರು, ಆಂಟಿಜೆನ್ ಟೆಸ್ಟ್, ಆರ್.ಟಿ.ಪಿ.ಸಿ.ಆರ್. ತಪಾಸಣೆಯ ನಂತರ ಆರೋಗ್ಯ ಇಲಾಖೆಯ ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ.
ಕೋವಿಡ್ ಸೋಂಕು ಗಣನೆಗೂ ಮೀರಿ ಹೆಛ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಚುರುಕುಗೊಳಿಸುವ ನಿಟ್ಟಿನಲ್ಲಿ ಬ್ಲೋಕ್, ಗ್ರಾಮ ಪಂಚಾಯತ್ ಗಳಲ್ಲಿ, ನಗರಸಭೆಗಳಲ್ಲಿ ರೇಡಿಯೋ ಪ್ರಸಾರ ಆರಂಭಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಐ.ಇ.ಸಿ. ಸಂಚಲನ ಸಮಿತಿ ಸಂಚಾಲಕ ಮಧುಸೂದನನ್ ಎಂ., ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್, ಕೆ.ಎಸ್.ಎಸ್.ಎಂ. ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಮಾಸ್ಟರ್ ಯೋಜನೆಯ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್, ಹಿರಿಯ ವರಿಷ್ಠಾಧಿಕಾರಿ ಕೆ.ಜಿ.ಮೋಹನನ್, ದಿವ್ಯಾ, ಶುಚಿತ್ವ ಮಿಷನ್ ಸಹಾಯಕ ಸಂಚಾಲಕ ಪ್ರೇಮರಾಜನ್ ಮೊದಲಾದವರು ಉಪಸ್ಥಿತರಿದ್ದರು.