ಕಾಸರಗೋಡು: ಬಂಗಾಳ ಆಳಸಮುದ್ರದಲ್ಲಿ ವಾಯುಭಾರ ತಲೆದೋರಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆ ಸಹಿತ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೀವ್ರ ಮಳೆ ತಲೆದೊರಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಭಾನುವಾರ(ಸೆ.20)ವೂ ತೀವ್ರ ಮಳೆ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಕಾಸರಗೋಡು ಜಿಲ್ಲೆಯಲ್ಲದೆ, ಇಡುಕ್ಕಿ, ಮಲಪ್ಪುರಂ, ಕಣ್ಣೂರು ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇರುವುದು. ಪ್ರಾಕೃತಿಕ ದುರಂತಗಳು ನಡೆಯುವ ಸಾಧ್ಯತೆಯ ಪ್ರದೇಶಗಳ ನಿವಾಸಿಗಳು ಜಾಗರೂಕತೆ ಪಾಲಿಸುವಂತೆ, ಗುಡ್ಡಗಳಿಂದ ಮಣ್ಣು ಕುಸಿಯುವ ಸಾಧ್ಯತೆಯಿರುವ ಮಲೆನಾಡ ಪ್ರದೇಶಗಳಲ್ಲಿ ರಾತ್ರಿ 7 ರಿಂದ ಬೆಳಗ್ಗೆ 7 ಗಂಟೆ ವರೆಗಿನ ಸಂಚಾರ ನಡೆಸದಿರುವಂತೆ ರಾಜ್ಯ ದುರಂತ ನಿವಾರಣೆ ಪ್ರಾ„ಕಾರ ತಿಳಿಸಿದೆ.
24 ತಾಸುಗಳಲ್ಲಿ 83.22 ಮಿ.ಮೀ. ಮಳೆ : ಕಾಸರಗೋಡು ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ 83.22 ಮಿ.ಮೀ. ಮಳೆ ಸುರಿದಿದೆ. ಬಿರುಸಿನ ಮಳೆ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈ ವರೆಗೆ 3586.38 ಮಿ.ಮೀ. ಮಳೆ ಲಭಿಸಿದೆ.