ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೃಷಿಕರು ಬೆಳೆಯುವ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲಪಿಸುವ ನಿಟ್ಟಿನಲ್ಲಿ ಸುಭಿಕ್ಷ ಕೇರಳಂ ಮಿಷನ್ ವತಿಯಿಂದ ತಯಾರಿಸಲಾದ ಸುಭಿಕ್ಷ ಕೇರಳಂ (ಮಾರಾಟ/ಖರೀದಿ) ಆಪ್ ಜನ ಗಮನ ಸೆಳೆಯುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೃಷಿ ನಡೆಸುವ ಯಾರಿಗೂ ಈ ಆಪ್ ಮೂಲಕ ತಾವು ಬೆಳೆಯುವ ತೆಂಗಿನಕಾಯಿ, ತರಕಾರಿ, ಹಾಲು, ಮೊಟ್ಟೆ ಸಹಿತ ಉತ್ಪನ್ನಗಳನ್ನು ಮಾರಾಟ ನಡೆಸಬಹುದು. ಮಧ್ಯವರ್ತಿಗಳ ಅಗತ್ಯವಿಲ್ಲದೆ ಕೃಷಿಕ ಮತ್ತು ಗ್ರಾಹಕರ ನಡುವೆ ಸಂಪರ್ಕ ನಡೆಸುವ ನಿಟ್ಟಿನಲ್ಲಿ ಮೊಬೈಲ್ ಫೆÇೀನ್, ವಾಟ್ಸ್ ಆಪ್ ನಂಬ್ರಗಳ ಮೂಲಕ ಸಂಪರ್ಕಸುವ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ, ಬೆಲೆ ನಿಗದಿಯನ್ನೂ ತಿಳಿಯಲು ಸಾಧ್ಯತೆಗಳಿವೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಸುಭಿಕ್ಷ ಕೆ.ಎಸ್.ಡಿ. ಎಂಬ ಈ ಆಪ್ ಉಚಿತವಾಗಿ ಡೌನ್ ಲೋಡ್ ನಡೆಸಬಹುದಾಗಿದೆ.