ತಿರುವನಂತಪುರ: ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿರುವ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಅನಾರೋಗ್ಯದ ಬಗ್ಗೆ ಆರಂಭಿಕ ಪ್ರತಿಕ್ರಿಯೆಯೊಂದಿಗೆ ಸಂದೇಶ ನೀಡಿರುವರು. ಅವರು ತಾನು ಈವರೆಗೆ ಇಷ್ಟೊಂದು ದಣಿದಿರಲಿಲ್ಲ. ಜೊತೆಗೆ ಹೃದಯ ಬಡಿತ ಈಗ ಹೆಚ್ಚುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ತಮ್ಮ ಚಿಕಿತ್ಸೆಯಲ್ಲಿ ಶುಭ ಹಾರೈಸಿದವರಿಗೆ ಹಣಕಾಸು ಸಚಿವರು ಧನ್ಯವಾದ ಅರ್ಪಿಸಿರುವರು.
" ಹಾರೈಕೆಗಳಿಗೆ ಧನ್ಯವಾದಗಳು. ನಾನು ನಿಮಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ನಾನು ಇಷ್ಟೊಂದು ದಣಿದಿಲ್ಲ. ನಾನು ಕಳೆದ ರಾತ್ರಿ ಚೆನ್ನಾಗಿ ಮಲಗಿದ್ದೆ, ಆದರೆ ಮಾತನಾಡುವಾಗ ನನ್ನ ಹೃದಯ ಬಡಿತ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸಲು ಸಾಮಾನ್ಯ ಚಿಕಿತ್ಸೆ ಮಾಡಲಾಗುತ್ತಿದೆ" ಎಂದು ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ. ಥಾಮಸ್ ಐಸಾಕ್ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮಾಡಿದ ಟ್ವೀಟ್‍ನಲ್ಲಿ ಕೇರಳದ ಆರೋಗ್ಯ ವ್ಯವಸ್ಥೆಯ ಬಗ್ಗೆ ಹೆಮ್ಮೆ ಇದೆ ಮತ್ತು ಅದನ್ನು ಇನ್ನಷ್ಟು ಸುಧಾರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿರುವ ಥಾಮಸ್ ಐಸಾಕ್ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಸ್ಪಂದಿಸಿದ್ದಾರೆ. ಥಾಮಸ್ ಐಸಾಕ್ ರಾಜ್ಯದಲ್ಲೇ ಕ್ಯಾಬಿನೆಟ್ ಸಚಿವರ ಪೈಕಿ ಕೋವಿಡ್ ದೃಢಪಟ್ಟ ಮೊದಲ ಸಚಿವರಾಗಿರುವರು. 67 ರ ಹರೆಯದ ಥಾಮಸ್ ಐಸಾಕ್ ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಚಿವರಿಗೆ ಕಳೆದ ಭಾನುವಾರ ಪ್ರತಿಜನಕ ಪರೀಕ್ಷೆಯ ಮೂಲಕ ಕೋವಿಡ್ ದೃಢಪಟ್ಟಿತ್ತು. ಇದರೊಂದಿಗೆ ವಿತ್ತ ಸಚಿವರೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದ ಆರೋಗ್ಯೆ ಸಚಿವೆ ಕೆ.ಕೆ.ಶೈಲಜಾ, ಇತರ ಕೆಲವು ಹಿರಿಯ ಸಿಪಿಎಂ ಮುಖಂಡರು ಮತ್ತು ಸಚಿವರ ಕಚೇರಿ ಸಿಬ್ಬಂದಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ಅನೇಕರು ಕ್ವಾರಂಟೈನ್ ಪ್ರವೇಶಿಸಿದ್ದಾರೆ.